ದಾಳಿ ವೇಳೆ ಅಧಿಕಾರಿಗಳು, ದಕ್ಷಿಣ ತಮಿಳುನಾಡು ಮೂಲದ ಅಬ್ದುಲ್ ಶುಕ್ಕೂರ್ ಹಾಗೂ ಶಫೀಕ್ ಅಹಮದ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ನ.17ರಂದು ಡಿಆರ್ಐ ಆಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಮಾಧವರಂನ ಐಸ್ ಕಾರ್ಖಾನೆಯ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಖಾನೆಯ ಬಳಿ ಐಸ್ ತುಂಬಿಸಲು ನಿಲ್ಲಿಸಿದ್ದಾಗ ವಾಹನವ್ನು ತಡೆದು ಮೊಬೈಲ್ ಐಸ್ ಕ್ರೀಮ್ ವ್ಯಾನ್ನೊಳಗೆ ಪರಿಶೀಲನೆ ನಡೆಸಿದ್ದಾರೆ.
ಆಗ ಫ್ರೀಜರ್ನಲ್ಲಿ ಬಚ್ಚಿಡಲಾಗಿದ್ದ 70 ಕೆಜಿ ಹೆರಾಯಿನ್ನ ಬಂಡಲ್ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಸದ್ಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ನ.18ರಂದು ಆಲಂದೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ
Laxmi News 24×7