Breaking News

BREAKING NEWS: ಸ್ವಾಮೀಜಿಗಳಾಯ್ತು ಈಗ ಶಾಸಕರ ಸರದಿ; ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಗೆ ಯತ್ನ!

Spread the love

ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಬಸವಲಿಂಗ ಸ್ವಾಮೀಜಿ ಪ್ರಕರಣ ಬೆನ್ನಲ್ಲೆ ರಾಜ್ಯದ ಮತ್ತೋರ್ವ ರಾಜಕಾರಣಿಗೆ ಹನಿಟ್ರ್ಯಾಪ್ ಯತ್ನಿಸಲಾಗಿದೆ.
ಹನಿಟ್ರ್ಯಾಪ್‍ಗೆ ಯತ್ನ ಸಂಬಂಧ ಈಗಾಗಲೇ ಶಾಸಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗೆ ಹನಿಟ್ರ್ಯಾಪ್‍ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್ ಒಂದರಿಂದ ವೀಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವೀಡಿಯೋ ಕಾಲ್ ಮಾಡಿದ್ದಾಳೆ.ಈ ಸಂಬಂಧ ಶಾಸಕರು ಇದೀಗ ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಯಾವುದೋ ಹೆಂಗಸಿನ ಖಾಸಗಿ ಅಂಗಾಂಗ ತೋರಿಸಿದರು. ನಂತರ ವಾಟ್ಸಪ್‍ಗೆ ಅಶ್ಲೀಲ ವೀಡಿಯೋ ಕಳಿಸಿದ್ದಾರೆ. ವೀಡಿಯೋ ಕಳುಹಿಸಿದ ನಂಬರಿನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಪ್ಪಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ