Breaking News

ರಜನಿಕಾಂತ್ ಅವರ ಜೈಲರ್-2 ಸಿನಿಮಾ ನೋಡಲು ಇಡೀ ಥಿಯೇಟರ್ ನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್

Spread the love

ಸೂಪರ್ ಸ್ಟಾರ್ ರಜನಿಕಾಂತ್‌ ಅವರ ಬಹುನಿರೀಕ್ಷಿತ ಜೈಲರ್ 2 ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಜನಿಕಾಂತ್ ಅಭಿಮಾನಿಯಾಗಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಜೈಲರ್ ಸಿನಿಮಾ ನೋಡಲು ಇಡೀ ಥಿಯೇಟರ್ ನ್ನೇ ಬುಕ್ ಮಾಡಿದ್ದಾರೆ.

ತಮ್ಮ ಪತ್ನಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಕುಳಿತು ಸಿನಿಮಾ ನೋಡಲು ಸಂಜು ಸ್ಯಾಮ್ಸನ್ ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿ, ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್, ಸೂಪರ್‌ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಈ ಹಿಂದೆಯೂ ಅವರು ರಜನಿಕಾಂತ್ ಮೇಲಿನ ಅಭಿಮಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ರಜನಿಕಾಂತ್ ಅವರ ಹೊಸ ಸಿನಿಮಾ ಬಿಡುಗಡೆಯಾದ ದಿನವೇ ನೋಡಬೇಕು ಎಂದುಕೊಂಡಿದ್ದರಂತೆ. ಆದರೆ ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿದ್ದ ಕಾರಣ ಸಿನಿಮಾ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರ ಸಿನಿಮಾ ನೋಡಲು ಸಂಜು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಜು, ‘ನನಗೆ ರಜನಿಕಾಂತ್ ಸರ್ ಅವರ ಸಿನಿಮಾಗಳೆಂದರೆ ತುಂಬಾ ಇಷ್ಟ. ಅವರ ಮುಂದಿನ ಸಿನಿಮಾ ಯಾವಾಗ ಬರುತ್ತದೆ ಎಂದು ಕಾಯುತ್ತಿರುತ್ತೇನೆ. ಸಾಧ್ಯವಾದಷ್ಟು ಅವರ ಸಿನಿಮಾಗಳನ್ನು ನೋಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನಿನ್ನೆ ದೆಹಲಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನೋಡಲು ಆಗಲಿಲ್ಲ. ಹೀಗಾಗಿ ಇಂದು ಸಿನಿಮಾ ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಂದು ಇಡೀ ಚಿತ್ರಮಂದಿರವನ್ನು ಬುಕ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಸ್ನೇಹಿತರನ್ನೆಲ್ಲ ಆಹ್ವಾನಿಸಿದ್ದೇನೆ. ನನ್ನ ಪತ್ನಿಯೂ ಇಲ್ಲಿದ್ದಾರೆ. ದೊಡ್ಡ ಪರದೆಯ ಮೇಲೆ ರಜನಿಕಾಂತ್ ಸರ್ ಅವರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಸಂಜು ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಅವರ ಈ ವಿಶೇಷ ಸಿನಿಮಾ ವೀಕ್ಷಣೆಗೆ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯೂ ಕೈಜೋಡಿಸಲಿದ್ದಾರೆ. ತಮಿಳು ಭಾಷೆ ಅರ್ಥಮಾಡಿಕೊಳ್ಳುವ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಸಿನಿಮಾ ವೀಕ್ಷಿಸಲು ಬರಲಿದ್ದಾರೆ ಎಂದಿರುವ ಸಂಜು, ‘ತಮಿಳು ಭಾಷೆ ಗೊತ್ತಿರುವ ತಂಡದವರು ಮತ್ತು ಸಹಾಯಕ ಸಿಬ್ಬಂದಿ ಎಲ್ಲರೂ ಸಿನಿಮಾ ನೋಡಲು ಬರುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಮೂರು ಕಡೆ ದಾಳಿ: 9 ಕೆಜಿಗೂ ಅಧಿಕ ಮಾದಕವಸ್ತು ವಶ

Spread the loveದೇಶಾದ್ಯಂತ ಮಾದಕವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕಲು ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ