Breaking News
Home / ಜಿಲ್ಲೆ / ದಕ್ಷಿಣ ಕನ್ನಡ / ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸೆನಿಟೈಜ್ಹರ್ ಉಪಕರಣ ವಿತರಣೆ

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸೆನಿಟೈಜ್ಹರ್ ಉಪಕರಣ ವಿತರಣೆ

Spread the love

ಮಂಗಳೂರು ನಗರ ದಕ್ಷಿಣದ ಶಾಸಕರೂ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಗರದ ಆಸ್ಪತ್ರೆಗಳು, ಸರಕಾರಿ ಕಚೇರಿಗಳು, ಪೋಲಿಸ್ ಠಾಣೆಗಳಿಗೆ ಸೆನಿಟೈಜ್ಹರ್ ಉಪಕರಣ ನೀಡಲಾಗುತ್ತಿದೆ.ಪ್ರಾರಂಭಿಕ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ, ಅಪರ ಜಿಲ್ಲಾಧಿಕಾರಿ ಕಚೇರಿ, ವೆನ್ಲಾಕ್ ಆಸ್ಪತ್ರೆ, ಇ ಎಸ್ ಐ ಆಸ್ಪತ್ರೆ, ನಗರ ವ್ಯಾಪ್ತಿಗೆ ಬರುವ ಪೋಲಿಸ್ ಠಾಣೆಗಳು, ಬ್ಯಾಂಕ್ ಹಾಗೂ ಇತರ ಕೆಲ ಸಾರ್ವಜನಿಕ ಕ್ಷೇತ್ರದ ಕಂಪೆನಿ ಹಾಗೂ ಕಚೇರಿಗಳಿಗೆ ವಿತರಿಸಲಾಗುವುದು.ಸಾಮಾನ್ಯವಾಗಿ ಕಚೇರಿ ಅಥವಾ ಆಸ್ಪತ್ರೆಗಳಲ್ಲಿ

ಸೆನಿಟೈಜ್ಹರ್ ಉಪಯೋಗಕ್ಕೆ ಒಬ್ಬ ವ್ಯಕ್ತಿಯನ್ನು ನೇಮಿಸಿರುತ್ತಾರೆ.ಈ ಮೆಶಿನ್ ಸ್ವಯಂ ಚಾಲಿತವಾಗಿದ್ದು ಕಾಲಿನಿಂದ ಒತ್ತಿ ಬಾಟಲಿ ಮುಟ್ಟದೇ ಎರಡೂ ಕೈಗೆ ಒಂದೇ ಸಲ ಅಗತ್ಯವಿದ್ದಷ್ಟೇ ಸೆನಿಟೈಜ್ಹರ್ ಉಪಯೋಗಿಸಬಹುದು. ಇದರಿಂದ ಮತ್ತೊಬ್ಬ ಸಿಬಂಧಿಯನ್ನು ನೇಮಿಸುವ ಅವಶ್ಯಕತೆ ಕೂಡ ಇರುವುದಿಲ್ಲ.ಈಗಾಗಲೇ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಸೇವಾಂಜಲಿ ಟ್ರಸ್ಟ್ ವತಿಯಿಂದ ಹಲವರಿಗೆ ಅಗತ್ಯ ವಸ್ತುಗಳ ಕಿಟ್ ಕೂಡ ವಿತರಣೆಯಾಗಿದ್ದು ಮುಂದುವರಿದ ಭಾಗವಾಗಿ ಈ ಉಪಕರಣ ನೀಡಲಾಗುತ್ತಿದೆ.

 

ಈ ಸಂಧರ್ಭದಲ್ಲಿ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ನ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ದೀಪಕ್ ಮಲ್ಯ,ಪ್ರಶಾಂತ ಹೆಗ್ಡೆ, ಸುದರ್ಶನ ಭಟ್, ಅನಿರುದ್ಧ ಭಟ್, ಹೃಷಿಕೇಶ್ ಪೈ ಉಪಸ್ಥಿತರಿದ್ದರು.


Spread the love

About Laxminews 24x7

Check Also

ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಮೊಸಳೆ

Spread the loveಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ಇಂದು ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಗರ್ಭಗುಡಿ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ