ರಾಮನಗರ: ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದ್ದ 120 ಮಂದಿ ಪಾದರಾಯನಪುರ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮೂವರನ್ನು ಶಂಕಿತರು ಎಂದು ಗುರುತಿಸಲಾಗಿದೆ. ಹೀಗಾಗಿ ಜೈಲಿನ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ತಿಳಿದ ಸಿಬ್ಬಂದಿ ಮಾತ್ರ ನಮ್ಮನ್ನು ಕ್ವಾರಂಟೈನ್ ಮಾಡಬೇಡಿ. ನಮ್ಮನ್ನು ಕ್ವಾರಂಟೈನ್ ಮಾಡುವುದಾದರೆ ನಮ್ಮ ಕ್ವಾಟ್ರಸ್‍ನಲ್ಲೇ ಕ್ವಾರಂಟೈನ್ ಮಾಡಲು ಹೇಳಿ. ನಮಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಎಂದು ಮಾಜಿ ಸಿಎಂ ಹೆಚ್‍ಡಿಕೆ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.
ಪಾದರಾಯನಪುರ ಆರೋಪಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಂಚಿದ್ದ ರಾಮನಗರ ನಗರಸಭೆ 15 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಗುರುವಾರ ಜೈಲಿಗೆ ಭೇಟಿ ನೀಡಿದ್ದವರನ್ನು ಒಂದೆಡೆ ಕರೆಸಿ ಮಾತುಕತೆ ಮಾಡಲಾಗಿದೆ. ಇದರಿಂದ ಕಳೆದ 3 ದಿನಗಳಿಂದ ಜೈಲಿನಲ್ಲಿ ಕಾರ್ಯ ನಿರ್ವಹಿಸಿದ್ದ ಸಿಬ್ಬಂದಿ ಆತಂಕ್ಕಕ್ಕೆ ಒಳಗಾಗಿದ್ದಾರೆ. ಮೂರು ದಿನಗಳಿಂದ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದ ಸಿಬ್ಬಂದಿ ಹಾಗೂ ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ಮಾಡಲು ಚಿಂತಿಸಲಾಗಿದ್ದು, ಜೈಲು ಸಿಬ್ಬಂದಿ ಆರೋಗ್ಯ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡುವ ಕುರಿತು ಚರ್ಚೆ ಮಾಡಲಾಗಿದೆ.
pic credits to publlic tv
ಈ ಮಧ್ಯೆ ಕುಮಾರಸ್ವಾಮಿ ಬಳಿ ಕಾರಾಗೃಹ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಕ್ವಾರಟೆಂನ್‍ನಲ್ಲಿ ಇಡಬೇಡಿ. ಯಾರೋ ಮಾಡಿದ ತಪ್ಪಿಗೆ ನಾವು ನೋವು ಅನುಭವಿಸುವಂತಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು, ನಿಮ್ಮ ಮನೆಗಳಲ್ಲಿಯೇ ಇರಿ ಯಾರು ಹೊರಬರಬೇಡಿ ಅಂತಾ ಜೈಲು ಸಿಬ್ಬಂದಿಗೆ ಎಚ್‍ಡಿಕೆ ಮನವಿ ಮಾಡಿದರು.
ಹಾಗೆಯೇ ಜೈಲಿನ ಮಹಿಳಾ ಸಿಬ್ಬಂದಿ, ಸಾರ್ ನಮೆಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ದಯಮಾಡಿ ನಮ್ಮನ್ನು ಕ್ವಾಟ್ರೆಸ್‍ನಲ್ಲೇ ಕ್ವಾರೆಂಟೈನ್ ಮಾಡೋಕೆ ಹೇಳಿ. ಬೇರೆ ಕಡೆ ಕ್ವಾರೆಂಟೈನ್ ಮಾಡಿಸಬೇಡಿ. ಪಾದರಾಯನಪುರ ಆರೋಪಿಗಳನ್ನ ಇಲ್ಲಿಗೆ ಕರೆ ತರುವಾಗ ನಮ್ಮ ಅಭಿಪ್ರಾಯ ಕೇಳಲಿಲ್ಲ. ಕನಿಷ್ಟ ಅಗತ್ಯ ಸೌಕರ್ಯಗಳನ್ನೂ ನೀಡಿಲ್ಲ. ಮಾಸ್ಕ್, ಸ್ಯಾನಿಟೈಸರ್ ಸಹ ನಮಗೆ ನೀಡಿಲ್ಲ. ದಯಮಾಡಿ ಬೇರೆ ಕಡೆ ಕ್ವಾರೆಂಟೈನ್ ಮಾಡಿಸಬೇಡಿ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನು ತಿಳಿದ ಎಚ್‍ಡಿಕೆ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ, ಜೈಲು ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.