ಬಾಕ್ಸ್ : ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ/ಅಭಿಮಾನಿಗಳಿಂದ ಸೇಬಿನ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ/ಹಾರಕ್ಕೆ ಬಳಸಿದ ಹಣ್ಣುಗಳು ವಸತಿ ಶಾಲೆ ಮಕ್ಕಳಿಗೆ ವಿತರಣೆ
ಕೆಲ ದಿನಗಳ ಹಿಂದೆ ಗೋಕಾಕ ಮತಕ್ಷೇತ್ರದ ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತಿಸಿ
ಗ್ರಾಮಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು.ನಂತರ ಭವ್ಯ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನ ಗಳಿಗೆ ಭೇಟಿ ನೀಡಿದ ಶಾಸಕರು ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹಾರಗೆ ಬಳಸಿದ್ದ ಸೇಬುಗಳನ್ನು ಹಾಗೂ ಅವರಿಗೆ ಸತ್ಕರಿಸಿದ ಹಣ್ಣು ಹಂಪಲಗಳನ್ನು ಸೋಮವಾರ ದಂದು ಅಮರನಾಥ ಅಭಿಮಾನಿಗಳ ವತಿಯಿಂದ ತುಕ್ಕಾನಟ್ಟಿಯಲ್ಲಿರುವ ಬರ್ಡ್ಸ ಕಿವಡ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ವಿತರಿಸಲಾಯಿತು .