Breaking News

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಇಲ್ಲದೆ ಬಡರೋಗಿಗಳ ಪರದಾಟ

Spread the love

ಹಾವೇರಿ: ಜಿಲ್ಲಾಸ್ಪತ್ರೆಯಲ್ಲೇ ಸೆಂಟರ್ ಸ್ಥಾಪಿಸಿ ತಿಂಗಳು ಕಳೆದಿದ್ದರೂ MRI ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ, ಪ್ರತಿದಿನ ಚಿಕಿತ್ಸೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.

ಜಿಲ್ಲಾಸ್ಪತ್ರೆಗೆ ಪ್ರತಿದಿನ ನೂರಾರು ಬಡರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ, ರೋಗಿಗಳು ದೂರದ ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಹಾಗೂ ಚಿತ್ರದುರ್ಗಕ್ಕೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಜಿಲ್ಲಾಸ್ಪತ್ರೆಯಲ್ಲೇ MRI ಸ್ಕ್ಯಾನಿಂಗ್ ಸೆಂಟರ್ ಸ್ಥಾಪಿಸಿ ತಿಂಗಳು ಕಳೆದಿದ್ದರೂ, ಇನ್ನೂ ಕಾರ್ಯಾರಂಭವಾಗಿಲ್ಲ. ಹೀಗಾಗಿ ಬಡರೋಗಿಗಳ ದೂರದ ಊರುಗಳ ಓಡಾಟ ಮಾತ್ರ ತಪ್ಪಿಲ್ಲ. ಕೂಡಲೇ MRI ಸೆಂಟರ್ ಆರಂಭಿಸಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.

ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 29 ವರ್ಷ ಕಳೆದಿದೆ. ಜಿಲ್ಲಾಸ್ಪತ್ರೆಗೆ ಬರುವ ಬಡರೋಗಿಗಳಿಗೆ MRI ಸ್ಕ್ಯಾನಿಂಗ್ ಅಗತ್ಯವಿದ್ದರೆ, ದೂರದ ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಹಾಗೂ ಚಿತ್ರದುರ್ಗದ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ.

ಇನ್ನು ಕೆಲವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದ್ದು, MRI ಸ್ಕ್ಯಾನಿಂಗ್‌ಗೆ 12 ಸಾವಿರದಿಂದ 15 ಸಾವಿರ ರೂ.ವರೆಗೆ ಖರ್ಚು ಮಾಡುವ ಪರಿಸ್ಥಿತಿ ಇದೆ. ಬಡರೋಗಿಗಳು ಬೇರೆ ಜಿಲ್ಲೆಗಳಿಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಹಣದ ಜೊತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ MRI ಸೆಂಟರ್ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕು ತಿಂಗಳಿಂದ MRI ಸೆಂಟರ್ ಸ್ಥಾಪಿಸುವ ಕಾಮಗಾರಿ ನಡೆದಿದ್ದು, ಕಾಮಗಾರಿ ಪೂರ್ಣಗೊಂಡು ಒಂದು ತಿಂಗಳು ಕಳೆದಿದೆ. ಆದರೆ, ಇನ್ನೂ ಸ್ಕ್ಯಾನಿಂಗ್ ಸೇವೆ ಆರಂಭವಾಗಿಲ್ಲ ಎನ್ನಲಾಗಿದೆ.

ಈಗಾಗಲೇ ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ರೇಡಿಯಾಲಜಿಸ್ಟ್‌ರನ್ನು ನೇಮಕ ಮಾಡಿ ಶೀಘ್ರದಲ್ಲೇ MRI ಸೆಂಟರ್ ಕಾರ್ಯಾರಂಭ ಮಾಡಬೇಕು. ಬಡರೋಗಿಗಳು ದೂರದ ಊರುಗಳಿಗೆ ತೆರಳಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿರುವುದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಗೆ ಪ್ರತಿದಿನ ನೂರಾರು ಬಡರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ MRI ಸ್ಕ್ಯಾನಿಂಗ್‌ಗಾಗಿ ಮಾತ್ರ ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ MRI ಸೆಂಟರ್ ಸ್ಥಾಪಿಸಲಾಗಿದ್ದರೂ, ಇನ್ನೂ ಸೇವೆ ಆರಂಭವಾಗದಿರುವುದು ರೋಗಿಗಳ ಸಮಸ್ಯೆಗೆ ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ MRI ಸ್ಕ್ಯಾನಿಂಗ್ ಯುನಿಟ್‌ನ್ನು ಕಾರ್ಯಾರಂಭ ಮಾಡಿಸಿ ಬಡರೋಗಿಗಳಿಗೆ ಅನುಕೂಲ ಕಲ್ಪಿಸಬೇಕಿದೆ.


Spread the love

About Laxminews 24x7

Check Also

ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು – ತುಂಡು ತುಂಡಾದ ದೇಹ

Spread the loveಚಿಕ್ಕಬಳ್ಳಾಪುರ: ಕಸ ವಿಂಗಡನೆ ಯಂತ್ರಕ್ಕೆ  ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕದಲ್ಲಿ ನಡೆದಿದೆ. ಕಾಡತಿಪ್ಪೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ