ಬೆಂಗಳೂರು, ಮಾ.14- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಕನಿಷ್ಠ 15 ರೂ.ಗಳನ್ನಾದರು ಕಡಿಮೆ ಮಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಕಾಂಗ್ರೆಸ್ ಒತ್ತಾಯಿಸಿದೆಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ವೈರಸ್ ಹಾಗೂ ಇನ್ನಿತರ ವಿದ್ಯಮಾನಗಳಿಂದ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಈ ಹಂತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲಾಗಿ ಆಮದು ಶುಲ್ಕವನ್ನು ಹೆಚ್ಚಿಸಿ ಪ್ರತಿ ಲೀಟರ್‍ಗೆ 3ರೂ. ಬೆಲೆ ಹೆಚ್ಚಳ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಗಲು ದರೋಡೆಯಾಗಿದೆ. ಇಂತಹ ದುರಾಡಳಿತಕ್ಕೆ ಜನಸಾಮಾನ್ಯರು ಮುಂದಿನ ದಿನಗಳಲ್ಲಿ ತಕ್ಕ ಶಿಕ್ಷೆ ವಿಧಿಸಲಿದ್ದಾರೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಪ್ರಸ್ತುತ ಕಚ್ಛಾ ತೈಲದ ಬೆಲೆ ಆಧರಿಸಿ ಪೆಟ್ರೋಲ್, ಡೀಸೆಲ್ ಮೇಲೆ ಕನಿಷ್ಠ 12ರಿಂದ 15 ರೂ. ಕಡಿಮೆ ಮಾಡಬಹುದಿತ್ತು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಇಂಧನ ಬೆಲೆ ಇಳಿಕೆಯಾದರೆ ಭಾರೀ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಈಗಲಾದರೂ ಜನ ಸಾಮಾನ್ಯರ ಕಷ್ಟ ಅರಿತು ಕ್ರಮ ಕೈಗೊಳ್ಳಲಿ ಎಂದು ಕಾಂಗ್ರೆಸ್ ಮನವಿ ಮಾಡಿದೆ. ಕಚ್ಛಾ ತೈಲದ ಪ್ರತಿ ಬ್ಯಾರಲ್‍ಗೆ 160 ಡಾಲರ್ ಇದ್ದಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ 32 ಡಾಲರ್ ಆದಾಗಲೂ ಮುಂದುವರೆದಿರುವುದು ಕಣ್ಣಿಗೆ ಕಂಡಂತೆ ನಡೆಯುತ್ತಿರುವ ಲೂಟಿಯಾಗಿದೆ. ಅದರಲ್ಲಿ ಆಮದು ಶುಲ್ಕ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
Check Also
ಸೈಫ್ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ
Spread the loveರಾಯಚೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್ ನಟಿ …