ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಪ್ರಸ್ತಾಪಿತ ಮಸೂದೆಯಲ್ಲೇನಿದೆ ಎಂಬ ವಿಶೇಷ ವರದಿ ಇಲ್ಲಿದೆ. ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ರಾಜ್ಯಾದ್ಯಂತ ಯುವ ಜನಾಂಗದ ಬದುಕನ್ನೇ ಕಸಿಯುತ್ತಿದೆ. ಅದೆಷ್ಟು ಮಂದಿ ಈ ಆನ್ಲೈನ್ ಬೆಟ್ಟಿಂಗ್ ಆಟಕ್ಕೆ ಸಿಲುಕಿ ಕೋಟ್ಯಾಂತರ ರೂ. ಸಾಲ ಮಾಡಿ …
Read More »ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ
ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಜಾಗೃತ ಫಾತಿಮಾ ದರ್ಗಾದಲ್ಲಿ ಭಾವೈಕತೆಯ ಮೊಹರಂ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಶೃದ್ಧಾ ಭಕ್ತಿಯಿಂದ ಕುಣ್ಣಿದು ಕುಪ್ಪಳಿಸಿ ಆಚರಿಸಿದರು ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ ಹೌದು ಇದು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ ಪ್ರತಿವರ್ಷದಂತೆ ಈ ಬಾರಿಯೂ ಅತ್ಯಂತ ಭಕ್ತಿಭಾವದಿಂದ …
Read More »ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ
ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಮುರಗುಂಡಿ ಹೊರವಲಯದಲ್ಲಿ ನಡೆದಿದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದಲ್ಲಿ ಅಪಘಾತ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಂಡಳಿಯ ವಿಜಯಪುರ ಬಸ್ ಡಿಪೋಗೆ ಸೇರಿದ ಬಸ್ ಹಾಗೂ ಕಾರ್ ಮದ್ಯ ಮುಖ ಮುಖಿ ಡಿಕ್ಕಿ. ಮುಖಾಮುಖಿ ಡಿಕ್ಕಿಯಾದ …
Read More »ಬೆಳಗಾವಿಯಲ್ಲಿ ಆಷಾಢ ಏಕಾದಶಿ ಸಂಭ್ರಮ… ವಿಠ್ಠಲನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಬೆಳಗಾವಿಯಲ್ಲಿ ಆಷಾಢ ಏಕಾದಶಿ ಸಂಭ್ರಮ… ವಿಠ್ಠಲನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇಂದು ದೇವಶಯನಿ ಆಷಾಢ ಏಕಾದಶಿ ಈ ಹಿನ್ನೆಲೆ ಬೆಳಗಾವಿಯ ಪಾಂಡುರಂಗನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಇಂದು ಆಷಾಢ ಏಕಾದಶಿ ಪಾಂಡುರಂಗನ ಭಕ್ತರಿಗೆ ಇದು ವಿಶೇಷ ದಿನ. ಬೆಳಗಾವಿಯ ಬಾಪಟ್ ಗಲ್ಲಿಯ ಕಾರ್ ಪಾರ್ಕೀಂಗ್’ನಲ್ಲಿರುವ ಶ್ರೀ ವಿಠ್ಠಲ-ರಕುಮಾಯಿಯ ಮಂದಿರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಬೆಳಿಗ್ಗೆಯೇ ಶ್ರೀ ವಿಠ್ಠಲ-ರುಕ್ಮೀಣಿಯ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು. ನಂತರ ಅಲಂಕಾರ, ಮಹಾ …
Read More »ಜನಮನ ಸೇಳೆದ ಭರ್ಜರಿ ತೆರೆಬಂಡಿ ಸ್ಪರ್ಧೆ
ಜನಮನ ಸೇಳೆದ ಭರ್ಜರಿ ತೆರೆಬಂಡಿ ಸ್ಪರ್ಧೆ ಜಾತ್ರೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದು ಸರ್ವೇ ಸಾಮಾನ್ಯ ಆದರೆ ಜೋಡೆತ್ತುಗಳ ತೆರೆಬಂಡಿ ಸ್ಪರ್ಧೆ ಆಯೋಜಿಸುವುದು ತೀರಾ ವಿರಳ ಅದರಲ್ಲೂ ವಿಜೇತರಿಗೆ ಬಹುಮಾನ ನೀಡುವುದರಲ್ಲಿರುವ ವಿಶೇಷ ಇದೇಯಲ್ಲಾ ಅದು ಮತ್ತಷ್ಟು ವಿಶೇಷವಾಗಿದೆ ಈ ಕುರಿತು ಒಂದು ವರದಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಪಟ್ಟಣದ ಬಸವೇಶ್ವರ ಜಾತ್ರಾ ಕಮೀಟಿ ವತಿಯಿಂದ ಸಾಧುನ ಗುಡಿ ಹತ್ತಿರ ಆಯೋಜಿಸಲಾಗಿದ್ದ ತೆರೆಬಂಡಿ ಸ್ಪರ್ಧೆಯಲ್ಲಿ ಮಹಾಲಿಂಗಪೂರ ರನ್ನ ಬೆಳಗಲಿ ಸೇರಿದಂತೆ …
Read More »ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್
ಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ ಅಲರ್ಟ್ ಆಗಿದೆ. ಗಡಿ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಆ ಸಮಿತಿಯಲ್ಲಿ ಬೆಳಗಾವಿಯ ಮೂವರು ಎಂಇಎಸ್ ಮುಖಂಡರಿಗೆ ಸ್ಥಾನ ಕೊಟ್ಟಿರುವ ವಿಚಾರ ಕನ್ನಡಿಗರನ್ನು ಕೆರಳಿಸಿದೆ. ಮಹಾರಾಷ್ಟ್ರ ಸರ್ಕಾರ ಗಡಿ ತಜ್ಞರ ಸಮಿತಿ ರಚನೆ ಮಾಡಿದ್ದು, ಆ ಸಮಿತಿಗೆ ಕೊಲ್ಹಾಪುರ ಸಂಸದ ಧೈರ್ಯಶೀಲ್ ಮಾನೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಬೆಳಗಾವಿಯ ಮಹೇಶ …
Read More »ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನ
ಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಶನಿವಾರ ನಡೆದಿದೆ. ಕನಕಪುರ ಮೂಲದ ಚಿನ್ನಾರಿ ಗೌಡ (65) ಗ್ರಾಹಕರ ನ್ಯಾಯಾಲಯದಲ್ಲಿ ಮೃತಪಟ್ಟ ವ್ಯಕ್ತಿ. ಶಾಂತಿ ನಗರದ ಬಿಎಂಟಿಸಿ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಗ್ರಾಹಕರ ನ್ಯಾಯಾಲಯಕ್ಕೆ ಇಂದು ಮುಂಜಾನೆ ಚಿನ್ನಾರಿ ಗೌಡ ಹಾಜರಾಗಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಕುಳಿತಿದ್ದಲ್ಲೇ ಅವರು ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಸ್ಥಳದಲ್ಲಿದ್ದವರ …
Read More »ಮಹದಾಯಿ ಯೋಜನೆಗೆ ನಿಮ್ಮ ಮಿತ್ರಪಕ್ಷದ ಗೋವಾ ಸರ್ಕಾರದ ಒಪ್ಪಿಗೆ ತನ್ನಿ: ಹೆಚ್ಡಿಕೆಗೆ ಪಾಟೀಲ್ ಪ್ರತಿಸವಾಲು
ಗದಗ: ”ಗೋವಾದಲ್ಲಿ ನಿಮ್ಮದೇ ಮಿತ್ರಪಕ್ಷದ ಸರ್ಕಾರವಿದೆ. ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಿಸಿ. ಗೋವಾದ ಒಪ್ಪಿಗೆ ತೆಗೆದುಕೊಂಡು ಬನ್ನಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಸವಾಲು ಹಾಕಿದರು. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಐದೇ ನಿಮಿಷದಲ್ಲಿ ಅನುಮೋದನೆ ಪಡೆಯುವುದಾಗಿ ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗದಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಹೆಚ್.ಕೆ.ಪಾಟೀಲ್, ”ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ಅಂತಾರಾಜ್ಯ ಜಲ ವಿವಾದ ಕಾಯ್ದೆಯಡಿ …
Read More »ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ: ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿಯ ವರದಿ ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಯುವಕರು ಸೇರಿದಂತೆ ವಿವಿಧ ವಯೋಮಾನದವರ ಹಠಾತ್ ಹೃದಯಾಘಾತ ಸಾವಿನ ಪ್ರಕರಣಗಳಿಗೂ ಮತ್ತು ಕೋವಿಡ್ ಲಸಿಕೆ ಪಡೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೋವಿಡ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ‘ಹಾರ್ಟ್ ಅಟ್ಯಾಕ್’ಗಳು ಸಂಭವಿಸಿವೆ ಎನ್ನುವುದು ವೈದ್ಯಕೀಯ ತನಿಖೆಯಲ್ಲಿ ದೃಢಪಟ್ಟಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ತಾಂತ್ರಿಕ ಸಮಿತಿಯು ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲಿ ದಿಢೀರ್ ಹೃದಯಾಘಾತಗಳಿಗೆ ಜನರು …
Read More »ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!
ಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. ಈ ಕುರಿತು ಎಸ್ಪಿ ಡಾ. ಬಿ. ಟಿ. ಕವಿತಾ ಅವರು ಮಾತನಾಡಿದ್ದು, ಮಹಿಳೆಯ ಕೊಲೆ ಕುರಿತು ಕಂಟ್ರೋಲ್ ರೂಮ್ಗೆ ಕರೆ ಬಂದಿತ್ತು. ನಂತರ ನಮ್ಮ ಠಾಣಾ ವ್ಯಾಪ್ತಿಗೆ ಬಂದಿದ್ದರಿಂದಾಗಿ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆವು. ಅಲ್ಲಿ ಶುಭಾ(38) ಎಂಬ ಮಹಿಳೆ ಮನೆ ಮುಂದೆ ಕೊಲೆಯಾಗಿ ಬಿದ್ದಿದ್ದರು ಎಂದು ತಿಳಿಸಿದರು.ಮೃತ ಮಹಿಳೆ …
Read More »
Laxmi News 24×7