Breaking News

ಕೋಟ್ಯಂತರ ರೂ. ಅಕ್ರಮ, ನಕಲಿ ಬಿಲ್ ಸೃಷ್ಟಿ ಆರೋಪ – ಗಂಗಾವತಿ ಪಂಚಾಯಿತಿ ಜೆಇ ಸಸ್ಪೆಂಡ್

Spread the love

ಕೊಪ್ಪಳ: ಇಲ್ಲಿನ ಗಂಗಾವತಿ ಪಂಚಾಯಿತಿಯಿಂದ ಅನುಷ್ಠಾನಗೊಂಡ ನಾನಾ ಕಾಮಗಾರಿಯಲ್ಲಿ ಅಕ್ರಮ ಎಸಗಿರುವ ಆರೋಪ ಸಾಬೀತಾದ ಹಿನ್ನೆಲೆ ಗಂಗಾವತಿ  ಪಂಚಾಯಿತಿ ಉಪವಿಭಾಗ ಎಂಜಿನಿಯರಿಂಗ್ ವಿಭಾಗದ ಜೂನಿಯರ್ ಎಂಜಿನೀಯರ್ ಪಲ್ಲವಿ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ಲೋಕಾಯುಕ್ತ ಪೊಲೀಸರ ಶಿಫಾರಸ್ಸಿನ ಮೇರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಪ್ರಧಾನ ಎಂಜಿನಿಯರ್ ಶ್ರೀನಾಥ್ ಕೆ., ಜೆ ಪಲ್ಲವಿಯನ್ನು ಅಮಾನತು ಮಾಡಿ ಆಗಸ್ಟ್ 14ರಂದು ಈ ಆಡಳಿತಾತ್ಮಕ ಕ್ರಮ ಜರುಗಿಸಿದ್ದಾರೆ. (ನರೇಗಾ) ಯೋಜನೆಯಡಿ ಕೋಟ್ಯಂತರ ರೂಪಾಯಿ ಅಕ್ರಮ, ನಕಲಿ ಬಿಲ್ ಸೃಷ್ಟಿಸಿದ ಆರೋಪ ಪಲ್ಲವಿ ಮೇಲಿದೆ.

ಇಲಾಖೆಯಿಂದ ಅನುಷ್ಠಾನಗೊಂಡ ಸಿ.ಸಿ. ರಸ್ತೆ ಕಾಮಗಾರಿಗಳಲ್ಲಿ ಕಳಪೆ ಮಟ್ಟದ ಕೆಲಸ ಮಾಡಿರುವ ಗಂಭೀರ ಆರೋಪದ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಕಿರಿಯ ಎಂಜಿನಿಯರ್ ಪಲ್ಲವಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ