ಹೆಬ್ಬಾಳ್ಕರ್ ಪಂಚಮಸಾಲಿ ಹೌದೊ ಅಲ್ಲವೋ ಎನ್ನುವ ಗೊಂದಲ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ.:ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದಲೇ ಸಮಾಜದವರು ಅವರನ್ನು ನಮ್ಮವರು ಎಂದು ಒಪ್ಪಿಕೊಂಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಯಾರೂ ಸಹ ವಿಷಯಾಂತರ ಮಾಡಬಾರದು. ನಮ್ಮವರು ಎನ್ನುವ ಕಾರಣಕ್ಕೆ ಮೀಸಲಾತಿ ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು ಎಂದು ಸಮರ್ಥಿಸಿಕೊಂಡರು. ಯಾರೊ ಒಬ್ಬರು ಏನೇನೋ ಮಾತನಾಡುತ್ತಾರೆ …

Read More »

ಹೆಣ್ಮಕ್ಳೇ ಸ್ಟ್ರಾಂಗು ಗುರೂ… ರಾಜ್ಯಕ್ಕೆ ಟಾಪರ್ ಇವರೇ, ದ.ಕ ಪ್ರಥಮ, ಗದಗ ಜಿಲ್ಲೆ ಕೊನೆ ಸ್ಥಾನ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಟಾಪರ್ ಗಳು ಇವರೇ: ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರ ಸ್ಥಾನದಲ್ಲಿ ಕೆ ಹೆಚ್ ಉರ್ವೀಶ್ ಪ್ರಶಾಂತ್ …

Read More »

ನಟರಾದ ಪ್ರಕಾಶ್ ರಾಜ್- ಕಮಲ್ ಹಾಸನ್ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಪ್ರಲ್ಹಾದ ಜೋಶಿ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಟರಾದ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಅವರ ಅಭಿಪ್ರಾಯಗಳು ಮತ್ತು ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಂಗಳವಾರ ಹೇಳಿದ್ದಾರೆ. ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಇಬ್ಬರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಇತ್ತೀಚಿಗೆ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ, ‘ಆ ಹೇಳಿಕೆಗಳಲ್ಲಿ …

Read More »

ಮೋದಿ ಭಾವಚಿತ್ರ, ಹೆಸರು ಬಳಕೆಗೆ ಈಶ್ವರಪ್ಪಗೆ ನಿರ್ಬಂಧಿಸಿ : ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಬೆಂಗಳೂರು : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ನೀಡಿಲ್ಲವೆಂದು ಬಂಡಾಯ ಎದ್ದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಈ ವೇಳೆ ಅವರು ಮೋದಿ ಅವರ ಭಾವಚಿತ್ರ ಹಾಗೂ ಹೆಸರನ್ನು ಬಳಸಿದಂತೆ ನಿರ್ಬಂಧಿಸಿ ಇದೀಗ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಚುನಾವಣಾ ವೇಳೆ ಮೋದಿ ಭಾವಚಿತ್ರ ಹೆಸರು ಬಳಕೆಗೆ ಕೆಎಸ್ ಈಶ್ವರಪ್ಪಗೆ ನಿರ್ಬಂಧ ವಿಧಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಇದೀಗ …

Read More »

ಸಾಲು ಸಾಲು ಹಬ್ಬ; ಕೋಳಿ ಮಾಂಸ ದುಬಾರಿ

ಹೊಸಕೋಟೆ: ಮುನಿ ದ್ಯಾವರ, ಜಾತ್ರೆ, ಯುಗಾದಿಯ ಹೊಸ ತೊಡಕು, ನಂತರ ರಂಜಾನ್ ಹಬ್ಬಗಳು ಸಲುಸಾಲಾಗಿ ಬಂದಿರುವುದರಿಂದ ಕೋಳಿ ಮಾಂಸದ ಬೆಲೆ ದಿಢೀರನೆ ಏರಿಕೆಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕ ಬಾಯ್ಲರ್ ಕೋಳಿ ಕೆ.ಜಿಗೆ ₹170 ಇದ್ದದ್ದು, ಏಕಾಏಕಿ ₹240 ಆಗಿದೆ. ಅದೇ ರೀತಿಯಲ್ಲಿ ದೊಡ್ಡ ಬಾಯ್ಲರ್ ಕೋಳಿ ₹180ರಿಂದ ₹240ಕ್ಕೆ ಮುಟ್ಟಿದೆ. ಕೆಲವೆಡೆ ಹತ್ತಿಪ್ಪತ್ತು ರೂಪಾಯಿ ವ್ಯತ್ಯಾಸವೂ ಆಗಿದೆ. ಚಿಕ್ಕಬಾಯ್ಲರ್ ಮಾಂಸದ ಬೆಲೆ ₹70 ಹೆಚ್ಚಳವಾಗಿದ್ದರೆ, ದೊಡ್ಡ ಬಾಯ್ಲರ್ …

Read More »

ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಿ- ಪ್ರಕಾಶ ರಾಜ್‌

ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಿ- ಪ್ರಕಾಶ ರಾಜ್‌ ಟೀಕೆ ಬೆಳಗಾವಿ: ‘ಒಂದೇ ಪಕ್ಷ, ಒಂದೇ ಭಾಷೆ ಎನ್ನುವ ಮಹಾಪ್ರಭು ಎರಡು ನಾಲಿಗೆ ಹಾವು ಇದ್ದಂತೆ. ಸುಳ್ಳುಗಳ ಮಹಾಪುರಾಣ ಹೇಳುವ ಈ ದುರಹಂಕಾರಿ ಮತ್ತು ಸರ್ವಾಧಿಕಾರಿಯನ್ನು ಕೆಳಗಿಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ನಟ ಪ್ರಕಾಶ ರಾಜ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.   ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ …

Read More »

ಖಾನಾಪುರ ಬಳಿ ಕಾಡುಕೋಣ ತಿವಿದು ವೃದ್ಧೆ ಸಾವು

ಖಾನಾಪುರ (ಬೆಳಗಾವಿ ಜಿಲ್ಲೆ):ಖಾನಾಪುರ ತಾಲ್ಲೂಕಿನ ಅಮಟೆ ಗ್ರಾಮದ ಹೊರವಲಯದಲ್ಲಿ ಸೋಮವಾರ ಕಾಡುಕೋಣ ತಿವಿದ ಪರಿಣಾಮ ಗ್ರಾಮದ ಸರಸ್ವತಿ ಅರ್ಜುನ ಗಾವಡೆ (80) ಮೃತಪಟ್ಟಿದ್ದಾರೆ. ‘ಮನೆಯಿಂದ ಹೊಲಕ್ಕೆ ಗೋಡಂಬಿ ಕಾಯಿಗಳನ್ನು ಕೀಳಲು ಹೊರಟ ಸಂದರ್ಭದಲ್ಲಿ ಸರಸ್ವತಿ ಅವರ ಹೊಟ್ಟೆಗೆ ಕಾಡುಕೋಣ ಕೋಡಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪ್ರಯೋಜನವಾಗಲಿಲ್ಲ’ ಎಂದು ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

Read More »

ಬೆಳಗಾವಿಯಲ್ಲಿ ಈದ್-ಉಲ್-ಫಿತ್ರ್ 11ರಂದು

ಬೆಳಗಾವಿ: ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ನಗರದಲ್ಲಿ ಏಪ್ರಿಲ್ 11ರಂದು ಈದ್-ಉಲ್-ಫಿತ್ರ್ ಆಚರಿಸಲು ತೀರ್ಮಾನಿಸಲಾಯಿತು. ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸಭಾಗೃಹದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಚಂದ್ರದರ್ಶನ ಸಮಿತಿ ಈ ನಿರ್ಧಾರ ಕೈಗೊಂಡಿತು.   ಶಾಸಕ ಆಸೀಫ್ ಸೇಠ್, ಇಸ್ಲಾಂ ಧರ್ಮಗುರುಗಳು, ಮುಖಂಡರು ಹಾಜರಿದ್ದರು‌

Read More »

ಲೋಕಸಭೆ ಚುನಾವಣೆ `ಮತದಾನದ ದಿನ’ ಸಾರಿಗೆ ನೌಕರರಿಗೆ `ವೇತನ ಸಹಿತ ರಜೆ’ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದಲ್ಲಿ 26-04-2024 & 07-05-2024 ರಂದು ನಡೆಯುವ ಲೋಕಸಭಾ ಚುನಾವಣೆ-2024 ರಲ್ಲಿ ರಾಜ್ಯ ಸಾರಿಗೆ ನೌಕರರಿಗೆ ಮತ ಚಲಾಯಿಸಲು ರಜೆ / ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ದಿನಾಂಕ:26-04-2024 & 07-05-2024 ರಂದು ಕರ್ನಾಟಕ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆ-2024 ರ ನಿಮಿತ್ತ ರಾಜ್ಯ ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಿದ್ದು. ಈ ಅಧಿಸೂಚನೆಯಲ್ಲಿ ಸೂಚಿಸಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ …

Read More »

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಲಿರುವ ಕೇಜ್ರಿವಾಲ್

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ವು ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿರುವುದನ್ನು ಪ್ರಶ್ನಿಸಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದ್ದಾರೆ ಎಂದು ದಿಲ್ಲಿ ಸಚಿವ ಸೌರಭ್ ಭಾರಧ್ವಜ್ ಹೇಳಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಎಎಪಿ ಹಿರಿಯ ನಾಯಕರೂ ಆಗಿರುವ ಸೌರಭ್ ಭಾರಧ್ವಜ್, ‘ನಾವು ಹೈಕೋರ್ಟ್‌ …

Read More »