Breaking News

15 ವರ್ಷಗಳ ಹಿಂದೆ ಸಕಲೇಶಪುರ ಜೈಲಿಂದ ಪರಾರಿಯಾಗಿದ್ದ ವಿಚಾರಣಾಧಿನ ಕೈದಿ ಗೋವಾದಲ್ಲಿ ಅಂದರ್‌

Spread the love

ಹಾಸನ: ಸುಮಾರು 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಹಾಸನ  ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಕಲೇಶಪುರ  ತಾಲೂಕಿನ, ನಲ್ಲುಲ್ಲಿ ಗ್ರಾಮದ ಚನ್ನಕೇಶವ ಎಂದು ಗುರುತಿಸಲಾಗಿದೆ. ಈತ ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಹಾಗೂ ದರೋಡೆ ಪ್ರಕರಣದಲ್ಲಿ ಸಕಲೇಶಪುರ ಜೈಲು ಸೇರಿದ್ದ. 2011ರಲ್ಲಿ ಜೈಲಿಂದ ಪರಾರಿಯಾಗಿ ಸುಮಾರು 15 ವರ್ಷ ತಲೆಮರೆಸಿಕೊಂಡಿದ್ದ.

ಆರೋಪಿ ಗೋವಾದಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಈತ ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಸದ್ಯ ಗೋವಾದ (Goa) ಹೋಟೆಲ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.

ಆರೋಪಿ ಬಂಧನಕ್ಕೆ ಎಸ್ಪಿ ಶುಭಾನ್ವಿತಾ, ಎಎಸ್ಪಿಗಳಾದ ತಮ್ಮಯ್ಯ ಹಾಗೂ ಶ್ರೀನಿಧಿ, ಕಾನ್‌ಸ್ಟೇಬಲ್‌ ಗಳಾದ ರವಿ ಕಬ್ಬತ್ತಿ, ಸೋಮಶೇಖರ್‌ ಹಾಗೂ ಬಸವರಾಜು ಭಾಗಿಯಾಗಿದ್ದರು.


Spread the love

About Laxminews 24x7

Check Also

ಕೆಪಿಎ ಆಸರೆ ಯೋಜನೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Spread the loveಗೋಕಾಕ: ಅವಿಸ್ಮರಣೀಯ ನೆನಪು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸದಾ ನೆನಪಿನಲ್ಲಿರುವಂತೆ ಮಾಡುವ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ ಉಪಯುಕ್ತವಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ