ಬೆಂಗಳೂರು: ಕರ್ನಾಟಕದಲ್ಲಿ ಇಂದು 8 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಯಾರ ಸಂಪರ್ಕಕ್ಕೂ ಸಿಗದ ಪಾದರಾಯನಪುರದ ವ್ಯಕ್ತಿಗೆ ಕೊರೊನಾ ಬಂದಿದೆ.
48 ವರ್ಷದ ವ್ಯಕ್ತಿ(ರೋಗಿ 513) ನಾನು ಲಾಕ್‍ಡೌನ್ ಬಳಿಕ ಮನೆಯಲ್ಲೇ ಇದ್ದೆ ಹೊರಗಡೆ ಹೋಗಿಲ್ಲ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ಪಾಸಿಟಿವ್ ಅಲ್ಲದ ವ್ಯಕ್ತಿಗಳ ಜೊತೆಗೂ ನಾನು ಸಂಪರ್ಕ ಹೊಂದಿಲ್ಲ. ವಿದೇಶಕ್ಕೆ ಹೋಗಿಲ್ಲ. ವಿದೇಶ ಹೋಗಿ ಬಂದವರ ಜೊತೆ ಸಂಪರ್ಕವನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಯಾರ ಸಂಪರ್ಕಕ್ಕೆ ಬಾರದೇ ಇದ್ದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಆರೋಗ್ಯ ಅಧಿಕಾರಿಗಳಿಗೆ ಕೊನೆಗೆ ಉತ್ತರ ಸಿಕ್ಕಿದೆ. ಪಾದರಾಯನಪುರ ಸೀಲ್‍ಡೌನ್ ಆಗುವುದಕ್ಕೆ ಮೊದಲೇ ಸೋಂಕಿತರು ಇದ್ದ ಜಾಗದಲ್ಲಿ ನಾನು ಐದು, ಆರು ಬಾರಿ ಓಡಾಡಿದ್ದೆ ಎಂದು ವ್ಯಕ್ತಿ ಹೇಳಿದ್ದರಿಂದ ಎದ್ದಿದ್ದ ಅನುಮಾನ ಎಲ್ಲ ಈಗ ಬಗೆ ಹರಿದಿದೆ.
ಈಗಾಗಲೇ ಪಾದರಾಯನಪುರದಲ್ಲಿ ಜಮಾತ್‍ಗೆ ಹೋಗಿ ಬಂದಿದ್ದ ವ್ಯಕ್ತಿಯಿಂದ 23 ಜನರಿಗೆ ಸೋಂಕು ಬಂದಿದೆ. ಈಗ ಇಂದು ಬಂದಿರುವ ವ್ಯಕ್ತಿಗೆ ಕೊರೊನಾ ಬಂದಿರುವುದು ಆರೋಗ್ಯ ಅಧಿಕಾರಿಗಳ ತಲೆಕೆಡಿಸಿದೆ.
ಈ ವ್ಯಕ್ತಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಈತನ ಮನೆಯ ಸುತ್ತ ಇದ್ದ 10ಕ್ಕೂ ಹೆಚ್ಚು ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು ಎಲ್ಲರನ್ನು ಪರೀಕ್ಷೆ ಒಳಪಡಿಸಲಾಗುತ್ತದೆ.
ಪಾದರಾಯನಪುರದಲ್ಲಿ ಸಮುದಾಯಕ್ಕೆ ಕೊರೊನಾ ಹಬ್ಬಿದ್ಯಾ ಎಂದು ತಿಳಿಯಲು ರ್‍ಯಾಂಡಮ್ ಆಗಿ ಅಲ್ಲಿದ್ದ 25 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 24 ಜನರ ಫಲಿತಾಂಶ ನೆಗೆಟಿವ್ ಬಂದಿದ್ದು, 48 ವರ್ಷದದ ವ್ಯಕ್ತಿ ಫಲಿತಾಂಶ ಪಾಸಿಟಿವ್ ಬಂದಿದೆ.