Breaking News

ಆರೋಗ್ಯಕರ ಜೀವನಕ್ಕೆ ಸತ್ವಯುತ ಆಹಾರವೇ ಅಡಿಪಾಯ: ಡಾ. ದಿಲೀಪ್ ನಾಟೇಕರ

Spread the love

ಬಾಗಲಕೋಟೆ: ಇಂದಿನ ವೇಗದ ಜೀವನಶೈಲಿಯಲ್ಲಿ ಸತ್ವಯುತ ಆಹಾರ ಸೇವನೆ ಅತ್ಯಂತ ಅವಶ್ಯಕವಾಗಿದೆ. ಫಾಸ್ಟ್ಫುಡ್ ಸಂಸ್ಕೃತಿಯಿAದ ಯುವಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದು ಬಿ.ವಿ.ವಿ. ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಿಲೀಪ್ ಎಸ್. ನಾಟೇಕರ ಹೇಳಿದರು.
ಬಿ.ವಿ.ವಿ. ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ ಶುಕ್ರವಾರ ವಿಶ್ವ ಆಹಾರ ದಿನದ ಅಂಗವಾಗಿ ಆಯೋಜಿಸಿದ್ದ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಪದ್ಧತಿಯ ಕುರಿತು ಕಲಿಯುವ ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ರೋಗಿಗಳಿಗೆ ಸೂಕ್ತ ಆಹಾರ ಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು. ವಿವಿಧ ರೋಗಗಳನ್ನು ನಿಯಂತ್ರಿಸಲು ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಅನುಸರಿಸಬೇಕಾದ ಆಹಾರ ಪದ್ಧತಿಗಳ ಜ್ಞಾನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಬಿ.ಎಸ್‌ಸಿ. ನರ್ಸಿಂಗ್ ಎರಡನೇ ಸೆಮಿಸ್ಟರ್‌ನ ೨೫೦ ವಿದ್ಯಾರ್ಥಿಗಳನ್ನು ೨೦ ಗುಂಪುಗಳಾಗಿ ವಿಂಗಡಿಸಿ, ವಿವಿಧ ಪೌಷ್ಟಿಕ ಆಹಾರ ಪದಾರ್ಥಗಳ ತಯಾರಿಕೆ ಹಾಗೂ ಅವುಗಳ ಮಹತ್ವದ ಕುರಿತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉಸ್ತುವಾರಿಯನ್ನು ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಕೂಗಲಿ ವಹಿಸಿದ್ದರು. ವಿಭಾಗದ ಪ್ರಾಧ್ಯಾಪಕ ರೇಣುಕಾ ರಾಜನಾಗಮ್ಮನವರ, ಸಹ ಪ್ರಾಧ್ಯಾಪಕ ಜಗದೀಶ ಹಿರೇಮಠ, ಉಪನ್ಯಾಸಕರಾದ ಗಣಧರ, ಮಹೇಶ್ವರಿ ಹಾಗೂ ಹೀನಾ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ಗುಂಪುಗಳ ಉಸ್ತುವಾರಿ ವಹಿಸಿದ್ದರು.


Spread the love

About Laxminews 24x7

Check Also

ರೋಗಿಗಳ ಗುಣಮುಖತೆಗೆ ಆಳವಾದ ಅಧ್ಯಯನ, ಸಮಗ್ರ ಚಿಕಿತ್ಸಾ ವಿಧಾನ ಅಗತ್ಯ: ಡಾ. ಶ್ರೀಪಾದ ಖೆಡೇಕರ

Spread the loveಬಾಗಲಕೋಟೆ: ರೋಗಿಗಳ ಗುಣಮುಖತೆಗೆ ರೋಗದ ಲಕ್ಷಣಗಳ ಜೊತೆಗೆ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಆಳವಾದ ಅಧ್ಯಯನ ಹಾಗೂ ಸಮಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ