Breaking News

ರಾಯಚೂರು ಭಾರತ ವನ ಯೋಜನೆಗೆ ಚಾಲನೆ ನೀಡಿದ ನಿರ್ಮಲಾ ಸೀತಾರಾಮನ್

Spread the love

ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಯಚೂರು  ಭಾರತ ವನ ಯೋಜನೆ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್  ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಯಚೂರಿನ ಯಕ್ಲಾಸಪುರ ಘನತಾಜ್ಯ ಘಟಕದಲ್ಲಿ ಭಾರತ ವನ ಯೋಜನೆ ಅಡಿ ಮಿಯಾವಾಕಿ ಪದ್ದತಿ ಮೂಲಕ ಅರಣ್ಯೀಕರಣವನ್ನ ವರ್ಚುವಲ್ ಆಗಿ ಉದ್ಘಾಟನೆ ಮಾಡಿದರು. ಸಸಿ ನೆಡುವ ವೇಳೆ ವಿದ್ಯಾರ್ಥಿಗಳ ಜೊತೆ ಪರಿಸರ ಬಗ್ಗೆ ಸಂವಾದ ನಡೆಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ʻತಾಯಿಯ ಹೆಸರಿನಲ್ಲಿ ಒಂದು ಮರʼ ಅಭಿಯಾನಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶಕ್ತಿನಗರದ ಆರ್‌ಟಿಪಿಎಸ್ ಗೆಸ್ಟ್ ಹೌಸ್‌ನಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರು, ಯಾದಗಿರಿ ಅಭಿವೃದ್ಧಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ನಳೀನ್ ಅತುಲ್, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಹಣಕಾಸು ಒಳಗೊಳ್ಳುವಿಕೆ ಮತ್ತು ಜೀವನೋಪಾಯ ಕ್ಷೇತ್ರಗಳ ಪ್ರಮುಖ ಅಭಿವೃದ್ಧಿಯ ಕುರಿತು ಪರಿಶೀಲನೆ ಮಾಡಿದರು.


Spread the love

About Laxminews 24x7

Check Also

ಕೊಲ್ಹಾಪುರದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅಪರೂಪದ 17 ಗಂಟೆಗಳ ‘ಬ್ರೈನ್ ಬೈಪಾಸ್’ ಶಸ್ತ್ರಚಿಕಿತ್ಸೆ ಯಶಸ್ವಿ,ಪ್ರಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ ಮರಜಕ್ಕೆ ಮತ್ತು ತಂಡದ ಐತಿಹಾಸಿಕ ಸಾಧನೆ

Spread the love ಕೊಲ್ಹಾಪುರ:ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಮತ್ತು ಅತ್ಯಂತ ಸಂಕೀರ್ಣವಾದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ