ನವದೆಹಲಿ: ಲಾಕ್‍ಡೌನ್ ಸಮಯದಲ್ಲಿ ದೆಹಲಿ ಪೊಲೀಸರು ಅನೇಕ ಮಾನವೀಯ ಕೆಲಸಗಳಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ವಿವಿಧೆಡೆ ಪೊಲೀಸರು ಅನೇಕ ಬಡವರ ಹಸಿವು ನೀಗಿಸಿದ್ದಾರೆ, ಮಹಿಳೆಯರು, ರೋಗಿಗಳಿಗೆ ಅಗತ್ಯ ವಸ್ತು, ಔಷಧಿ ತಲುಪಿಸುವ ಕೆಲಸ ಮಾಡಿದ್ದಾರೆ.
ಅಂಥೆ ಲಾಕ್‍ಡೌನ್ ಸಮಯದಲ್ಲಿ ದೆಹಲಿಯ ಪೊಲೀಸ್ ಪೇದೆ ದಯಾವೀರ್ ಸಿಂಗ್ ಅವರು ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ
ದಯಾವೀರ್ ಸಿಂಗ್ ಅವರ ಸಹಾಯಕ್ಕೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಗುವಿಗೆ ದಯಾವೀರ್ ಸಿಂಗ್ ಅವರ ಹೆಸರನ್ನು ಇಟ್ಟಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪೇದೆ ದಯಾವೀರ್ ಸಿಂಗ್, ‘ಅಂತಹ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದಕ್ಕೆ ನನಗೆ ಖುಷಿಯಾಗಿತ್ತು. ಇಂದು ಅವರು ನೀಡಿದ ಗೌರವವನ್ನು ಸ್ವೀಕರಿಸಲು ಹೆಮ್ಮೆಪಡುತ್ತೇನೆ’ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ 128 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿಯ ಕಂಟೇನರ್ ವಲಯಗಳ ಸಂಖ್ಯೆ 92ಕ್ಕೆ ಏರಿಕೆ ಕಂಡಿದೆ. ಈವರೆಗೂ ದೆಹಲಿಯಲ್ಲಿ 2,376 ಜನರಿಗೆ ಸೋಂಕು ತಗುಲಿದ್ದು, 808 ಜನರು ಗುಣಮುಖರಾಗಿದ್ದಾರೆ. 50 ಮಂದಿ ಕೊರೊನಾಗೆ ಬಲಿಯಾದರೆ, 1,518 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.