Breaking News
Home / ಜಿಲ್ಲೆ / ನೆಹರು ಓರ್ವ ಅಯೋಗ್ಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ನೆಹರು ಓರ್ವ ಅಯೋಗ್ಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ.

Spread the love

 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ

ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಮಾಡಿದತಪ್ಪಿನಿಂದ

ನೆಹರು ಓರ್ವ ಅಯೋಗ್ಯ ವ್ಯಕ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

 

ಬಾಗಲಕೋಟೆ: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಮಾಡಿದ ತಪ್ಪಿನಿಂದ ವಿಲಾಸಿ ಜೀವನ ನಡೆಸುತ್ತಿದ್ದ ನೆಹರು ಅಂತಹ ಓರ್ವ ಅಯೋಗ್ಯ ವ್ಯಕ್ತಿ ಈ ದೇಶದ ಮೊದಲ ಪ್ರಧಾನಿಯಾದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸಿಎಎ ಕಾಯ್ದೆ ಪರ ಜಾಗೃತಿ ಅಭಿಯಾನದಲ್ಲಿ ಮಾಅತನಾಡಿದ ಯತ್ನಾಳ್, ದೇಶದ ಪ್ರಧಾನಿಯಾಗಲು ಸರ್ಧಾರ್ ವಲ್ಲಭಾಯಿ ಪಟೇಲ್ ಅವರಿಗೆ ಬಹುಮತ ಇತ್ತು. ಆದರೆ, ಮಹಾತ್ಮ ಗಾಂಧಿ ಮಾಡಿದ ತಪ್ಪಿನಿಂದ ನೆಹರು ಪ್ರಧಾನಿಯಾದರು. ಆತನೋರ್ವ ಅಯೋಗ್ಯ, ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿ ಎಂದು ಕಿಡಿಕಾರಿದರು.

ಅವನಿಗೆ ಸಿಗರೇಟ್ ಲಂಡನ್​ನಿಂದ ಬರ್ತಾ ಇತ್ತು. ಬಟ್ಟೆ ಕ್ಲೀನ್ ಮಾಡಲು ಸಹ ದೋಬಿಗೆ ಲಂಡನ್ ಹೋಗ್ತಾ ಇದ್ವು. ಇಂತವರು ಬಡತನದ ಬಗ್ಗೆ ಮಾತನಾಡುತ್ತಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸಿಎಎ ಕಾಯ್ದೆಯಿಂದ ದೇಶದ ಯಾವುದೇ ಮುಸಲ್ಮಾನನಿಗೂ ತೊಂದರೆ ಇಲ್ಲ. ಖುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ ಅಷ್ಟೆ. ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಸಿದ್ದರಾಮಯ್ಯ ತನ್ನ ಜೀವ ಹೋದರೂ ಪರವಾಗಿಲ್ಲ ನಾನು ಮಂಗಳೂರಿಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಆದರೆ, ಪ್ರವಾಹ ಸಂದರ್ಭದಲ್ಲಿ ಇವರು ಬಾದಾಮಿಗೆ ಬರೋದು ಬಿಟ್ಟು ಎಲ್ಲಿ ಮಲಗಿದ್ದರು ಎಂದು ಪ್ರೆಶ್ನಿಸಿದರು.

ಇನ್ನು ಕಾಂಗ್ರೆಸ್ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ವಿರುದ್ಧವೂ ಕಿಡಿಕಾರಿದ ಬಸನಗೌಡ ಪಾಟೀಲ್ ಯತ್ನಾಳ್, ಯಾರವ ಸಿಎಂ ಇಬ್ರಾಹಿಂ, ಆತ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬನಾದವ, ಅವರಪ್ಪನ ಅಪ್ಪನನ್ನು ಹೋಗಿ ಕೇಳಿ ಆತ ಮಲ್ಲಪ್ಪ ಆಗಿರಬೇಕು ಇಲ್ಲವೇ ಕಲ್ಲಪ್ಪ ಆಗಿರಬೇಕು, ಇವರೆಲ್ಲ ಒರಿಜಿನಲ್ ಅಲ್ಲ. ನಾವು ಒರಿಜಿನಲ್ ಎಂದು ವ್ಯಂಗ್ಯವಾಡಿದ್ದಾರೆ


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ