ಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ.
ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ನಿಲ್ದಾಣದಿಂದ ರಾತ್ರಿ 12ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ. ಮಾದವಾರ ನಿಲ್ದಾಣದಿಂದ ರಾತ್ರಿ 12:15ಕ್ಕೆ ಕೊನೆ ಮೆಟ್ರೋ ಸಂಚಾರ ಮಾಡಲಿದೆ. ರೇಷ್ಮೆ ಸಂಸ್ಥೆ ನಿಲ್ದಾಣದಿಂದ ರಾತ್ರಿ 12:20ಕ್ಕೆ ಕೊನೆ ಮೆಟ್ರೋ ಹೊರಡಲಿದೆ.
ಯೆಲ್ಲೋ ಮಾರ್ಗ ಆರ್.ವಿ ರಸ್ತೆ ನಿಲ್ದಾಣದಿಂದ ರಾತ್ರಿ 12:15ಕ್ಕೆ ಸಂಚರಿಸಲಿದೆ. ಬೊಮ್ಮನಹಳ್ಳಿ ನಿಲ್ದಾಣದಿಂದ ರಾತ್ರಿ 11:55ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ.
Laxmi News 24×7