Breaking News

ರಾಜ್ಯದಲ್ಲಿ 1 ಕೋಟಿ ಮತದಾರರ ಹೆಸರು SIR ನೆಪದಲ್ಲಿ ಡಿಲೀಟ್ ಆಗಿದೆ: ಡಿಕೆಶಿ

Spread the love

ಬೆಂಗಳೂರು: ರಾಜ್ಯದಲ್ಲಿ 1 ಕೋಟಿ ಮತದಾರರ ಹೆಸರು SIR ನೆಪದಲ್ಲಿ ಡಿಲೀಟ್ ಆಗಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್‌  ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಎಸ್‌ಐಆರ್‌ನಿಂದ  ದೇಶದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿರುವುದನ್ನು ಎಲ್ಲರೂ ಗಮನಿಸಿದ್ದೀರಿ. ಇಡೀ ದೇಶ ಎಸ್‌ಐಆರ್ ಪದ್ಧತಿ ನೋಡಿ ತಲ್ಲಣಗೊಂಡಿದೆ. ನಾನು ಸಿಎಂ ಆಗಿ, ಪ್ರಜಾಸೇವಕನಾಗಿ ನಿಮ್ಮ ಮತವನ್ನ ಕಾಪಾಡಲು ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಕೂಡ ಇದರಲ್ಲಿ ವಿಫಲನಾಗಿದ್ದೇನೆ. ಇದನ್ನು ನಾನು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ.

1 ಕೋಟಿಗೂ ಹೆಚ್ಚು ಮತ ಕಡಿಮೆ ಆಗಿರುವುದನ್ನು ಗಮನಿಸಿದ್ದೀರಿ. ಅದು ವಿವಿಧ ರೀತಿ ಆಗಿರಬಹುದು. 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ಕೊಡುವ ಪದ್ಧತಿ ನಡೆಯುತ್ತಿದೆ. ಇದರ ಬಳಿಕ ಇನ್ನೂ 3 ದಿನದ ಒಳಗೆ ಅರ್ಜಿ ಕೊಡುವಂತಹ ಸಂದರ್ಭದಲ್ಲಿ ಕೆಲ ಬಿಜೆಪಿಯವರು, ಅವರ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು, ದಲಿತರ ಮತವನ್ನ ತಗೆದಾಕಲು ಮುಂದಾಗಿದ್ದರೆ. ಇದಕ್ಕಾಗಿ ಫಾರ್ಮ್ 7ನ್ನು ಕೊಡುತ್ತಿದ್ದಾರೆ. ನಮ್ಮ ನಾಯಕರು ಕೂಡ ಇದರ ಬಗ್ಗೆ ದಾಖಲೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಕ್ರಿಮಿನಲ್ ತನಿಖೆ ಬಹಳ ಅವಶ್ಯಕತೆ ಇದೆ.

ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್ಎಗಳು ನನಗೆ ನಿಖರ ಮಾಹಿತಿ ನೀಡಬೇಕು. ದಯವಿಟ್ಟು ಈ ಮಾಹಿತಿಯನ್ನು dkshivakumarlistens@gmail.com ಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಮತ ಉಳಿಸುವುದು ನನ್ನ ಕರ್ತವ್ಯ. ಬಿಎಲ್‌ಎ 1, ಬಿಎಲ್‌ಎ 2, ಬಿಎಲ್‌ಓಗಳು ನಿಮ್ಮ ಬಳಿ ಏನೇನು ಮಾಹಿತಿ ಇದೆ. ಕೂಡಲೇ ನನ್ನ ಕಚೇರಿಗೆ ತಲುಪಿಸಿ. ನಾಳೆ (ಅ.2) ನಾನು ಖುದ್ದಾಗಿ ಎಲೆಕ್ಷನ್ ಕಮಿಷನ್‌ಗೆ ಭೇಟಿ ನೀಡಿ ಮಾತನಾಡುತ್ತೇನೆ. ಅನೇಕ ಸಂಗತಿಗಳೊಂದಿಗೆ ಈ ವಿಚಾರ ಬಯಲಿಗೆ ಎಳೆಯುತ್ತೇನೆ. ಇದಕ್ಕೆ ತಮ್ಮ ಮಾಹಿತಿ ಬೇಕಾಗಿದೆ. ಅದಕ್ಕಾಗಿ ಈ ವಿಡಿಯೋ ಮೂಲಕ ಅನೇಕ ವಿಚಾರವನ್ನ ನಿಮಗೆ ತಿಳಿಸುತ್ತಿದ್ದೇನೆ.

ನಿಮ್ಮೆಲ್ಲರ ಮತವನ್ನ ತೆಗೆಯಲು ಬಿಜೆಪಿಯವರು, ಅನೇಕ ಬಾರಿ ಸೋತವರು ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಪಕ್ಷದ ಹಾಲಿ ಶಾಸಕರಿರುವ ಕಡೆ ಈ ರೀತಿ ಮಾಡುತ್ತಿದ್ದಾರೆ. ಈಶ್ವರ್ ಖಂಡ್ರೆ ಅವರ ಭಾಲ್ಕಿ ಕ್ಷೇತ್ರದಲ್ಲಿ, ನಯನ ಮೋಟಮ್ಮ, ತನ್ವೀರ್ ಸೇಠ್ ಅವರ ಕ್ಷೇತ್ರದಲ್ಲೂ ಈ ರೀತಿ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಇದೊಂದು ದೊಡ್ಡ ಕುತಂತ್ರ ನಡೆಯುತ್ತಿದೆ, ಎಲ್ಲರೂ ಜಾಗೃತರಾಗಿ. ಎಲ್ಲೆಲ್ಲಿ ಫಾರ್ಮ್ 7 ಕೊಟ್ಟಿದ್ದಾರೆ ಎಂದು 12 ಗಂಟೆ ಒಳಗೆ ಮಾಹಿತಿ ಒದಗಿಸಿ ಎಂದು ಸಿಎಂ ಡಿಕೆಶಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಇಬ್ಬರನ್ನು ಬಲಿ ಪಡೆದಿದ್ದ ‘ಶೌರ್ಯ’ ಸೆರೆಹಿಡಿದ ಏಳೇ ತಿಂಗಳಲ್ಲಿ ಸಾವು

Spread the loveಶಿವಮೊಗ್ಗ: ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆ  ಶೌರ್ಯ (32) ಶಿವಮೊಗ್ಗದ  ಸಕ್ರೆಬೈಲು  ಆನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ