Breaking News

ತಾಯಿ ಜೊತೆ ಅಕ್ರಮ ಸಂಭಂಧ… ನಡು ರಸ್ತೆಯಲ್ಲಿ ಕೊಂದ ಮಗ…ಶವದ ಬೆನ್ನ ಮೇಲೆ ಕಾಲಿಟ್ಟು ಪೊಲೀಸರಿಗಾಗಿ ಕಾದ ಹಂತಕ

Spread the love

ತಾಯಿ ಜೊತೆ ಅನೈತಿಕ ಸಂಭಂಧ ಇಟ್ಟುಕೊಂಡಿದ್ದ ಪ್ರಿಯಕರನನ್ನ ಮಗ ನಡು ರಸ್ತೆಯಲ್ಲಿ ಕೊಚ್ಚಿ ಕೊಂದು ಶವದ ಬೆನ್ನ ಮೇಲೆ ಕಾಲಿಟ್ಟು ಪೊಲೀಸರಿಗಾಗಿ ಕಾದು ಶರಣಾದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಬರೋಬ್ಬರಿ 16 ಬಾರಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದಾನೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿ. ಈರಯ್ಯ ಮಠಪತಿ ಕೊಲೆ ಆರೋಪಿ.ನಿನ್ನೆ ಸಂಜೆ ರಸ್ತೆ ಮಧ್ಯೆ ಬರುತ್ತಿದ್ದ ಬಸಪ್ಪ ಹೊಸಮನಿಯನ್ನ ತಡೆದು ಹತ್ಯೆಗೈದು ಬಳಿಕ ಪೊಲೀಸರಿಗೆ ಕರೆ ಮಾಡಿ‌ ಕೊಲೆ ಮಾಡಿದ್ದಾಗಿ ಈರಯ್ಯ ಮಾಹಿತಿ ನೀಡಿದ್ದಾನೆ. ಪೊಲೀಸರು ಬರುವವರೆಗೂ ರಸ್ತೆ ಮಧ್ಯೆ ಬೆನ್ನ ಮೇಲೆ ಕಾಲಿಟ್ಟು ನಿಂತಿದ್ದ ಆರೋಪಿ ಈರಯ್ಯನನ್ನ ಸವದತ್ತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹತ್ತು ವರ್ಷದ ಹಿಂದೆ ಈರಯ್ಯ ತಾಯಿ ಜೊತೆಗೆ ಬಸಪ್ಪ ಓಡಿ ಹೋಗಿದ್ದ. ಮತ್ತೆ ಗ್ರಾಮಕ್ಕೆ ವಾಪಾಸ್ ಬಂದಿದ್ದ.ಇದೇ ದ್ವೇಷ ಇಟ್ಟುಕೊಂಡು ಸಾರ್ವಜನಿಕವಾಗಿ ಹತ್ಯೆ ಮಾಡಿ ಈರಯ್ಯ ಅಟ್ಟಹಾಸ ಮೆರೆದಿದ್ದಾನೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಸವದತ್ತಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: 100 ಹಾಸಿಗೆಗಳ ಆಸ್ಪತ್ರೆ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ! 

Spread the love​ನಮ್ಮ ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ