ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಡ್ಯಾಮ್ಗೆ ಪ್ರವಾಸಕ್ಕೆ ಬಂದಿದ್ದ ತಾಯಿ, ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮುಳುಗುತ್ತಿದ್ದ ತಂದೆ ಹಾಗೂ ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ರೇಖಾ (39) ಹೇಮಂತ್ (19) ಮೃತ ದುರ್ದೈವಿಗಳು. ರಾಜು ಹಾಗೂ ಮಗಳು ದೀಪ ಅಪಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕರಾಗಿರುವ ರಾಜು, ಮಕ್ಕಳಿಗೆ ಗಾಂಧಿ ಜಯಂತಿ ರಜೆ ಇದ್ದಿದ್ದರಿಂದ ಕುಟುಂಬ ಸಮೇತ ಜಲಾಶಯಕ್ಕೆ ಬಂದಿದ್ದರು. ಈ ವೇಳೆ, ಜಲಾಶಯದ ನೀರಿನಲ್ಲಿ ಆಟ ಆಡಲು ನೀರಿನಲ್ಲಿ ಇಳಿದಿದ್ದಾಗ ಈ ದುರ್ಘಟನೆ ನಡೆದಿದೆ.
ಅಗ್ನಿಶಾಮಕದಳ ಸಿಬ್ಬಂದಿ ಇಬ್ಬರ ಮೃತ ದೇಹಗಳನ್ನ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7