Home / new delhi / ಇಂದು ಬೆಳಗ್ಗೆ ಮೋದಿ ಭಾಷಣ – ಕಲರ್ ಲಾಕ್‍ಡೌನ್ ಹೇಗಿರಬಹುದು? ಯಾವುದಕ್ಕೆ ವಿನಾಯಿತಿ?

ಇಂದು ಬೆಳಗ್ಗೆ ಮೋದಿ ಭಾಷಣ – ಕಲರ್ ಲಾಕ್‍ಡೌನ್ ಹೇಗಿರಬಹುದು? ಯಾವುದಕ್ಕೆ ವಿನಾಯಿತಿ?

Spread the love

ನವದೆಹಲಿ: ಮೊದಲ ಹಂತದ ಲಾಕ್‍ಡೌನ್ ಇಂದು ಮಧ್ಯರಾತ್ರಿಗೆ ಅಂತ್ಯವಾಗಲಿದ್ದು, 21 ದಿನಗಳ ಗೃಹಬಂಧನ ಅಂತ್ಯವಾಗಲಿದೆ. ಇಂದು ಬೆಳಗ್ಗೆ 10 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದು, ದೇಶದ ಗಂಭೀರ ಪರಿಸ್ಥಿತಿಯನ್ನು ಜನರಿಗೆ ವಿವರಿಸಲಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ನಡೆದ ಎಲ್ಲ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಹಲವು ವಿನಾಯಿತಿಗಳೊಂದಿಗೆ ಏಪ್ರಿಲ್ 30 ವರೆಗೂ ಲಾಕ್‍ಡೌನ್ ವಿಸ್ತರಿಸುವ ಒಮ್ಮತದ ನಿರ್ಣಯಕ್ಕೆ ಬರಲಾಗಿತ್ತು. ಈ ನಿರ್ಣಯವನ್ನು ಮೊದಲ ಹಂತದ ಲಾಕ್‍ಡೌನ್ ಕೊನೆಯ ದಿನವಾದ ಇಂದು ಪ್ರಧಾನಿ ಮೋದಿ ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಬಾರಿಯ ಲಾಕ್‍ಡೌನ್ ವಿಭಿನ್ನವಾಗಿರಲಿದೆ ಎಂದು ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದರು. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಒಂದು ಲಾಕ್‍ಡೌನ್ ನಿಮಯಗಳು ಕಠಿಣವಾಗಲಿದ್ದು, ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಜನರಿಗೆ ಕೆಲ ವಿನಾಯಿತಿಗಳನ್ನು ಸರ್ಕಾರ ನೀಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪರಿಸ್ಥಿತಿ ಹೇಗಿದೆ ಮತ್ತು ಲಾಕ್‍ಡೌನ್ ವಿಸ್ತರಿಸುವ ನಿರ್ಧಾರ ಯಾಕೆ ಎನ್ನುವುದನ್ನ ಹೇಳಿ ವಿನಾಯಿಗಳನ್ನು ಘೋಷಿಸಬಹುದು. ಒಂದು ವೇಳೆ ಕೇವಲ ಲಾಕ್‍ಡೌನ್ ವಿಸ್ತರಣೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತಾನಾಡಿದರೆ ಭಾಷಣದ ಬಳಿಕ ಕೇಂದ್ರ ಗೃಹ ಇಲಾಖೆ ವಿನಾಯಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ಇಡೀ ದೇಶವನ್ನು ಕೇಂದ್ರ ಸರ್ಕಾರ ಮೂರು ವಿಭಾಗಗಳಾಗಿ ವಿಂಗಡಿಸುವ ಸಾಧ್ಯತೆ ಇದೆ. ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್‍ಗಳನ್ನು ಮಾಡಲಿದ್ದು, ಈ ಝೋನ್‍ಗಳನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ರೂಪಿಸಲಿದೆ.

ರೆಡ್ ಝೋನ್:
* ರೆಡ್ ಝೋನ್‍ನಲ್ಲಿ ಸರ್ಕಾರ ಯಾವ ವಿನಾಯಿತಿಗಳು ಸಿಗುವುದಿಲ್ಲ ಎನ್ನಲಾಗುತ್ತಿದೆ.
* ಕೇಂದ್ರ ಸರ್ಕಾರವೇ ಹಾಟ್‍ಸ್ಪಾಟ್ ಪ್ರದೇಶಗಳನ್ನು ಸೀಲ್ ಮಾಡಲು ಸೂಚನೆ ನೀಡಬಹುದು.
* ಮನೆಯಿಂದ ಯಾರೂ ಹೊರಬಾರದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರಬಹುದು.
* ಉತ್ತರ ಪ್ರದೇಶ ದೆಹಲಿ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಬಹುದು.
* ಸರ್ಕಾರದ ವತಿಯಿಂದಲೇ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಬಹುದು.
* ಈ ಪ್ರದೇಶದಲ್ಲಿ ಮುಂದಿನ ಹದಿನಾರು ದಿನ ಹೈ ಅಲರ್ಟ್ ಘೋಷಣೆ ಮಾಡಬಹುದು

ಆರೇಂಜ್ ಝೋನ್:
* ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬಹುದು.
* ಉಳಿದ ಪ್ರದೇಶದಲ್ಲಿ ಲಾಕ್‍ಡೌನ್ ಅನ್ವಯಿಸಲಿದ್ದು, ನಿಯಮಗಳ ಸಡಿಲಿಕೆ ಮಾಡಬಹುದು.
* ಸಣ್ಣ ಪ್ರಮಾಣದಲ್ಲಿ ಅಂಗಡಿಗಳನ್ನು ತೆರಯಲು ಆರ್ಥಿಕ ವಹಿವಾಟು ನಡೆಸಲು ಅವಕಾಶ ನೀಡಬಹುದು.
* ಕೃಷಿ, ಸಣ್ಣ ಕಾರ್ಖಾನೆಗಳನ್ನು ಅಗತ್ಯ ಎಚ್ಚರಿಕೆಯೊಂದಿಗೆ ನಡೆಸಲು ಸೂಚನೆ ನೀಡಬಹುದು.
* ಜನ ಪ್ರಯಾಣ ನಡೆಸುವುದನ್ನು ತಡೆಯಲು ಸಾರಿಗೆ ಸಂಚಾರ ನಿಷೇಧ ಮುಂದುವರಿಸಬಹುದು.
* ನಿರ್ದಿಷ್ಟ ಪ್ರದೇಶದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು.

ಗ್ರೀನ್ ಝೋನ್:
* ಸೋಂಕು ಕಾಣಿಸಿಕೊಳ್ಳದ ಈ ಜಿಲ್ಲೆಗಳಲ್ಲಿ ಹೆಚ್ಚು ವಿನಾಯಿತಿ ಸಿಗುವ ಸಾಧ್ಯತೆ ಇದೆ.
* ಅಂತರ್ ಜಿಲ್ಲೆ ಸಂಚಾರ ನಿಷೇಧಿಸಿ ಆರ್ಥಿಕ ವಹಿವಾಟು ಆರಂಭಿಸಲು ಅವಕಾಶ ನೀಡಬಹುದು.
* ಅಂಗಡಿಗಳು, ಸಣ್ಣ ಪುಟ್ಟ ವ್ಯವಹಾರ ಹೋಟೆಲ್ ಉದ್ಯಮಗಳ (ಪಾರ್ಸಲ್‍ಗೆ ಮಾತ್ರ) ಆರಂಭಿಸಬಹುದು.
* ಜನರು ಮುನ್ನೆಚ್ಚರಿಕೆ ಕ್ರಮ ವಹಿಸಿ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡಬಹುದು.
* ಗ್ರಾಮೀಣ ಪ್ರದೇಶದಲ್ಲಿ ಕೃಷಿ, ನರೇಗಾ ಮೂಲಕ ಕೆಲಸ ಆರಂಭಿಸಲು ಅವಕಾಶ ನೀಡಬಹುದು.
* ಈ ವಲಯಗಳಿಗೆ ಕಾರ್ಮಿಕರನ್ನು ಕರೆ ತರಲು ಸಣ್ಣ ಪ್ರಮಾಣದಲ್ಲಿ ಸಾರಿಗೆ ಆರಂಭಿಸಲು ಅನುವು ಮಾಡಬಹುದು.
* ಮಹಿಳಾ ಸ್ವ ಸಹಾಯ ಗುಂಪುಗಳ ಕಾರ್ಯಗಳನ್ನು ಪುನಾರಂಭ ಮಾಡಲು ಅವಕಾಶ ನೀಡಬಹುದು.
* ಕೊರೊನಾ ಸೋಂಕು ಕಾಣದ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸೇಲ್ಪ್ ರಿಸ್ಕ್ ಮೇಲೆ ಕೈಗಾರಿಕೆ ಆರಂಭಿಸಲು ಅನುವು ನೀಡಬಹುದು.
* ಪ್ರಮುಖವಾಗಿ ರೊಟೇಷನ್‍ನಲ್ಲಿ ಸರ್ಕಾರಿ ಕಚೇರಿಗಳನ್ನು ತೆರದು ಸೇವೆ ನೀಡಲು ಸೂಚಿಸುವ ಸಾಧ್ಯತೆ ಇದೆ.

ಈ ನಡುವೆ ಕೇಂದ್ರ ಕೈಗಾರಿಕಾ ಉದ್ಯಮಗಳ ಸಚಿವಾಲಯ ಕೆಲ ಕೈಗಾರಿಗೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಬಹುದು ಎನ್ನಲಾಗಿದ್ದು, ಯಾವ ಕೈಗಾರಿಗೆಗಳಿಗೆ ಅವಕಾಶ ಸಿಗಬಹುದು ಅಂತ ನೋಡುವುದಾದರೆ,

– ಹೆವಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಉಪಕರಣಗಳು
– ಆಟೋ ಮೊಬೈಲ್, ಉಕ್ಕು ಕಾರ್ಖಾನೆಗಳು
– ವಿದ್ಯುತ್ ಚಾಲಿತ ಮಗ್ಗಗಳು, ರಕ್ಷಣೋತ್ಪನ ತಯಾರಿಕಾ ಘಟಕಗಳು
– ಸಿಮೆಂಟ್, ರಬ್ಬರ್, ಕೃಷಿ ಆಧಾರಿತ ಕೈಗಾರಿಕೆಗಳು, ರಾಸಾಯನಿಕ ಮತ್ತು ರಸಗೊಬ್ಬರ
– ಕಟ್ಟಡ ನಿರ್ಮಾಣ ಕಾಮಗಾರಿ, ಬೀದಿಬದಿ ವ್ಯಾಪಾರಿಗಳು, ರಿಪೇರಿ ಅಂಗಡಿಗಳು
– ಪೇಂಟ್ಸ್, ಆಹಾರ ಮತ್ತು ಪಾನೀಯ ಉತ್ಪನ್ನ ತಯಾರಿಕ ಘಟಕಗಳು
– ಪ್ಲಾಸ್ಟಿಕ್ ತಯಾರಿಕಾ ಘಟಕಗಳು
– ಆಭರಣ ತಯಾರಿಕಾ ಘಟಕಗಳು ಅವಕಾಶ ನೀಡಬಹುದು
– ಅಲ್ಲದೇ ಒಟ್ಟು ನೌಕರರಲ್ಲಿ ಶೇಕಡಾ 20-25ರಷ್ಟು ನೌಕರರಿಗೆ ಮಾತ್ರ ಪಾಳಿಯಲ್ಲಿ ಕೆಲಸಕ್ಕೆ ಅವಕಾಶ
– ನೌಕರರನ್ನು ಕಾರ್ಖಾನೆಗಳಿಗೆ ಕರೆ ತರಲು ವಿಶೇಷ ಬಸ್‍ಗಳು, ರೈಲು ಓಡಾಟದ ವ್ಯವಸ್ಥೆ
– ಜಿಲ್ಲೆಗಳೊಳಗೆ, ಜಿಲ್ಲೆಗಳ ನಡುವೆ, ರಾಜ್ಯದೊಳಗೆ, ರಾಜ್ಯಗಳ ನಡುವೆ ಸಾರಿಗೆ ಸಂಪರ್ಕಕ್ಕೆ ಅವಕಾಶ ಕೊಡಬಹುದು

ಹೀಗೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು ಪ್ರಧಾನಿ ಮೋದಿ ಭಾಷಣದಲ್ಲಿ ಏನು ಹೇಳಬಹುದು ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ