ಶಿವಮೊಗ್ಗ: ಎಂಎಲ್‌ಸಿ ಡಿ.ಎಸ್ ಅರುಣ್ ಅವರು ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಎಷ್ಟಿದೆ ಎಂಬುದನ್ನು ಮಾಧ್ಯಮಗಳ ಮುಂದೆ ಪರೀಕ್ಷಿಸಿ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಪೆಟ್ರೋಲ್‌ಗೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪ ಮಾಡಿದೆ. ಪೆಟ್ರೋಲ್ -ಎಥೆನಾಲ್ ಪರೀಕ್ಷೆಗೆ ಲ್ಯಾಬ್‌ಗೆ ಹೋಗಬೇಕಿಲ್ಲ. ಯಾರು, ಎಲ್ಲಿ ಬೇಕಾದರೂ ಎಥೆನಾಲ್ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡಬಹುದಾಗಿದೆ ಎಂದು ಅವರ ಪೆಟ್ರೋಲ್ ಬಂಕ್‌ನಲ್ಲೇ ಪರೀಕ್ಷೆ ಮಾಡಿ ತೋರಿಸಿದ್ದಾರೆ.
ಇದಕ್ಕಾಗಿ ಅವರು 100 ಎಂಎಲ್ ನೀರು ಹಾಗೂ 100 ಎಂಎಲ್ ಪೆಟ್ರೋಲ್ ತೆಗೆದುಕೊಂಡು ಗಾಜಿನ ಬಾಟಲಿಯಲ್ಲಿ ಮಿಶ್ರಣ ಮಾಡಿದ್ದಾರೆ. ಈ ವೇಳೆ 20 ಎಂಎಲ್ ಎಥೆನಾಲ್ ನೀರಿನಲ್ಲಿ ಮಿಶ್ರಣವಾಗಿ, 80 ಎಂಎಲ್ ಪೆಟ್ರೋಲ್ ಗೋಚರವಾಗುತ್ತದೆ. ಇದರಿಂದ 20% ಎಥೆನಾಲ್ ಇರುವುದು ನಮಗೆ ಗೊತ್ತಾಗುತ್ತದೆ ಎಂದು ಅವರು ತೋರಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ಆಕ್ರೋಶಗೊಂಡಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ಪ್ರಯತ್ನ ಸರಿಯಲ್ಲ. ಗೊಂದಲ ಮೂಡಿಸುವ ಬದಲು, ವಾಸ್ತವಾಂಶ ಪರಿಶೀಲಿಸಬೇಕು. ನಿಗದಿತ ಪ್ರಮಾಣಕ್ಕಿಂತ ಎಥೆನಾಲ್ ಜಾಸ್ತಿ ಇದ್ರೇ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.
Laxmi News 24×7