ಚಿಕ್ಕಮಗಳೂರು: ಇಲ್ಲಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಗಲಾಟೆ ಮಾಡಿ, ಮಹಿಳಾ ಜೈಲರ್ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಜೈಲಿನ ಬ್ಯಾರಕ್ 1 ರಲ್ಲಿ ನ.9ರ ರಾತ್ರಿ ಊಟದ ಸಮಯದಲ್ಲಿ ವಿಚಾರಣಾಧೀನ ಕೈದಿಗಳಾದ ಅಹ್ಮದ್ ಖಾನ್, ಅಸ್ಪಾನ್ ಇರ್ಷಾದ್ ಅಹ್ಮದ್, ಹರ್ಶಿತ್ ಮತ್ತು ಅವಿನಾಶ್ ದೊಂಡ್ರೇ ನಡುವೆ ಗಲಾಟೆಯಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದು, ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಜೈಲು ಅಧೀಕ್ಷಕಿ ದೀಪಾ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ಆರೋಪಿಗಳು ದರೋಡೆ, ಕೊಲೆ ಯತ್ನ, ಪೋಕ್ಸೊ ಪ್ರಕರಣಗಳ (POCSO Case) ಅಡಿಯಲ್ಲಿ ಜೈಲು ಸೇರಿದ್ದರು. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.
Laxmi News 24×7