Breaking News

ರಾಮ ಮಂದಿರದಲ್ಲಿ `ಮಿಲಿಟರಿ ಮಾದರಿ’ ಶಿಸ್ತು – ಆಡಳಿತದಲ್ಲಿ ಮಹತ್ವದ ಬದಲಾವಣೆ

Spread the love

ಲಕ್ನೋ: ಕಾಣಿಕೆ ಹಣ ಕಳ್ಳತನದ ) ಘಟನೆ ಬಳಿಕ ಅಯೋಧ್ಯೆಯ ರಾಮ ಮಂದಿರದ  ಆಡಳಿತ ವ್ಯವಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ಮಿಶ್ರಾ ಅಧಿಕಾರ ವಹಿಸಿಕೊಂಡ ಬಳಿಕ ದೇವಾಲಯದ ಸಿಬ್ಬಂದಿ ನಿರ್ವಹಣೆ, ಭದ್ರತೆ, ಕಣ್ಗಾವಲು ಹಾಗೂ ಕಾಣಿಕೆ ಹಣದ ಎಣಿಕೆ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದೆ.

ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಡಿಜಿಟಲ್ ಪ್ರೊಫೈಲ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ನೇಮಕಾತಿ, ಹುದ್ದೆ, ಕರ್ತವ್ಯ, ನಿಯೋಜನೆ ಹಾಗೂ ಹಾಜರಾತಿ ಸೇರಿದಂತೆ ಸಿಬ್ಬಂದಿಯ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತದೆ. ಸಿಬ್ಬಂದಿಯ ಕರ್ತವ್ಯ ಮತ್ತು ನಿಯೋಜನೆಗಳ ಮೇಲೂ ಸಾಫ್ಟ್‌ವೇರ್ ಮೂಲಕ ನಿಗಾ ಇರಿಸಲಾಗುತ್ತದೆ.

ದೇವಾಲಯದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಪೊಲೀಸ್ ಪರಿಶೀಲನೆ ಕಡ್ಡಾಯಗೊಳಿಸಲಾಗುತ್ತಿದೆ. ಪರಿಶೀಲನೆ ಪೂರ್ಣಗೊಳ್ಳದೆ ಯಾರಿಗೂ ದೇವಾಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ. ಸಿಬ್ಬಂದಿಯ ಸಂಬಂಧಿಕರು ಮತ್ತು ಕುಟುಂಬದವರ ವಿವರಗಳನ್ನೂ ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವ ಯೋಜನೆಯೂ ಇದೆ.

ಪ್ರತಿಯೊಂದು ಇಲಾಖೆಗೆ ಪ್ರತ್ಯೇಕ SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಣ್ಗಾವಲು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಸುಮಾರು 40 ಹೊಸ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ. ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ವಿಡಿಯೋ ಕಣ್ಗಾವಲು ಹಾಗೂ ದೈನಂದಿನ ತಪಾಸಣೆಗೆ ಒತ್ತು ನೀಡಲಾಗುತ್ತಿದೆ.

ಸಿಬ್ಬಂದಿಯ ಹಾಜರಾತಿ ದಾಖಲಿಸಲು ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸಲಾಗುತ್ತದೆ. ಸುಮಾರು 450 ಖಾಸಗಿ ಭದ್ರತಾ ಸಿಬ್ಬಂದಿಗೆ ಕರ್ತವ್ಯದ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ. ಸಿಬ್ಬಂದಿಯ ಚಟುವಟಿಕೆಗಳ ಮೇಲ್ವಿಚಾರಣೆಯಲ್ಲೂ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.

ಸಿಬ್ಬಂದಿಗೆ ಪ್ರತ್ಯೇಕ ಡ್ರೆಸ್ ಕೋಡ್:
ದೇವಾಲಯದ ವಿವಿಧ ವಿಭಾಗಗಳ ಸಿಬ್ಬಂದಿಗೆ ಪ್ರತ್ಯೇಕ ಸಮವಸ್ತ್ರ ನಿಗದಿಪಡಿಸಲಾಗಿದೆ. ಎಸ್‌ಬಿಐ ಸಿಬ್ಬಂದಿಗೆ ಸ್ಕೈ ಬ್ಲೂ ಶರ್ಟ್ ಮತ್ತು ಕಪ್ಪು ಪ್ಯಾಂಟ್, ಏಜೆನ್ಸಿ ಸಿಬ್ಬಂದಿಗೆ ಕೇಸರಿ ಶರ್ಟ್ ಮತ್ತು ಕಪ್ಪು ಪ್ಯಾಂಟ್, ಟ್ರಸ್ಟ್ ಸಿಬ್ಬಂದಿಗೆ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ನಿಗದಿಪಡಿಸಲಾಗಿದೆ. ಅರ್ಚಕರು, ಭಂಡಾರಿ ಮತ್ತು ಕೊಠಾರಿ ಸಿಬ್ಬಂದಿಗೆ ಪಿತಾಂಬರಿ ರೇಷ್ಮೆ ಧೋತಿ ಇರಲಿದೆ.

ಕಾಣಿಕೆ ಹಣ ಎಣಿಕೆಯಲ್ಲೂ ಕಟ್ಟುನಿಟ್ಟು:
ಕಾಣಿಕೆ ಹಣದ ಎಣಿಕೆ ಪ್ರಕ್ರಿಯೆಯಲ್ಲೂ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಎಸ್‌ಬಿಐ ತಂಡದಿಂದ ಎರಡು ಪಾಳಿಗಳಲ್ಲಿ ಪ್ರತ್ಯೇಕವಾಗಿ ನಗದು ಎಣಿಕೆ ನಡೆಸುವ ವ್ಯವಸ್ಥೆ ಮಾಡಲಾಗಿದೆ. ಹಣ ಎಣಿಸುವ ಸ್ಥಳದಲ್ಲಿ ಮೇಜು-ಕುರ್ಚಿಗಳನ್ನು ತೆರವುಗೊಳಿಸಿ ನೆಲದ ಮೇಲೆಯೇ ಹಣ ಎಣಿಕೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.


Spread the love

About Laxminews 24x7

Check Also

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

Spread the loveಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ