Breaking News

ಮೆಟ್ರೋ ನಮ್ಮ ಯೋಜನೆ, ನಾವು ಸಾಲ ಮಾಡಿ ಕಟ್ಟಿರೋ ಯೋಜನೆ, ಬಿಜೆಪಿ ಪ್ರಚಾರ ತೆಗೆದುಕೊಳ್ತಿದೆ: ಡಿಕೆಶಿ

Spread the love

ರಾಮನಗರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದು ತಮ್ಮ ಕನಕಪುರ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ರಾತ್ರಿ ರಾಮನಗರ ಕಾರ್ಯಕ್ರಮ ಮುಗಿಸಿ ಕನಕಪುರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ, ಬೆಳಿಗ್ಗೆ ಬೆಂಗಳೂರಿಗೆ ತೆರಳುವ ಮುನ್ನ ಕ್ಷೇತ್ರದ ಜನರ ಅಹವಾಲು ಸ್ವೀಕಾರ ಮಾಡಿದ್ರು. ಮುಂದಿನ ವಾರ ಮತ್ತೆ ಕ್ಷೇತ್ರಕ್ಕೆ ಬಂದು ಸಂಪೂರ್ಣ ಅಹವಾಲುಗಳನ್ನ ಸ್ವೀಕರಿಸುತ್ತೇನೆ ಎಂದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಮಧ್ಯಾಹ್ನ ನಾನು ದೆಹಲಿಗೆ ತೆರಳುತ್ತಿದ್ದೇನೆ. ಸಂಜೆ ರಾಹುಲ್ ಗಾಂಧಿ (Rahul Gandhi), ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್‌ಪಿ ನಾಯಕರ ಜೊತೆ ಪ್ರಮುಖ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ. ಸದ್ಯದ ಮಟ್ಟಿಗೆ ಯಾವುದೇ ಕೇಂದ್ರ ಸಚಿವರನ್ನು ಭೇಟಿಯಾಗುವ ಯೋಜನೆಯಿಲ್ಲ ಎಂದರು‌.

ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಮೆಟ್ರೋ ಉದ್ಘಾಟನೆಗೆ ಕರೆದಿದ್ದೇವೆ. ಆದರೆ ಬಿಜೆಪಿ ನಾಯಕರು ಈಗಲೇ ಇದರ ಪ್ರಚಾರ ಪಡೆಯಲು ಹೋಗುತ್ತಿದ್ದಾರೆ. ಮೆಟ್ರೋ ಯೋಜನೆ ನಮ್ಮ ರಾಜ್ಯದ ಜನರ ಹಣದಿಂದ, ನಾವು ಸಾಲ ಮಾಡಿ ಕಟ್ಟಿರುವ ಯೋಜನೆ ಎಂದರು.

ಇನ್ನು ಕಬ್ಬು ಬೆಳೆಗಾರರ ಹೋರಾಟ ಅಂತ್ಯ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ರೈತರಲ್ಲಿ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಸಚಿವರು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಕೆಲವು ರೈತರು ಕಾರ್ಖಾನೆ ಆರಂಭಕ್ಕೆ ಭದ್ರತೆ ಕೊಡಿ ಎಂದು ಕೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೂ ಮಾತನಾಡಿದ್ದು, ಅವರು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ರೈತರು ಗೌರವ ತರುವ ರೀತಿಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಸಭೆಗಳಲ್ಲಿ ‘ಏಯ್ ಬಾರೋ, ಹೋಗೋ’ ಎಂದು ಅಗೌರವವಾಗಿ ಮಾತನಾಡುವುದು ಸರಿಯಲ್ಲ. ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಬೆದರಿಸುವ ಕೆಲಸವನ್ನ ರೈತರು ಮಾಡಬಾರದು ಎಂದು ಸಿಎಂ ಡಿಕೆಶಿ ತಿಳಿಸಿದರು.


Spread the love

About Laxminews 24x7

Check Also

ಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ‌ನಿಯೋಗ ಹೋದ ಉದಾಹರಣೆ ಇಲ್ಲ: ಹೆಚ್‌ಡಿಕೆ

Spread the loveಬೆಂಗಳೂರು: ಬರ ಪರಿಹಾರಕ್ಕಾಗಿ  ಕೇಂದ್ರಕ್ಕೆ  ಯಾವತ್ತು ಸರ್ವಪಕ್ಷದ ನಿಯೋಗಕ್ಕೆ ಕರೆದುಕೊಂಡು ಹೋದ ಉದಾಹರಣೆ ಇಲ್ಲ ಅಂತ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ