Breaking News

ನೀನು ಗಂಡ್ಸೇ ಅಲ್ಲ ಅಂತಾ ಹೆಂಡ್ತಿ ಬೈತಿದ್ರು – ಡೆಡ್ಲಿ ಮರ್ಡರ್‌ ಆರೋಪಿಯ ರಹಸ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

Spread the love

ಬೆಂಗಳೂರು: ಹಂತಕ ಇಂದುಶೇಖರ್‌ ತನ್ನನ್ನ ಪತ್ರಕರ್ತ ಅಂತಾ ಬಿಂಬಿಸಿಕೊಂಡಿದ್ದ. ಆದ್ರೆ ಮನೆಯಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗುತ್ತಲೇ ಇತ್ತು. ನೀನು ಗಂಡ್ಸೇ ಅಲ್ಲಾ ಅಂತಾ ಹೆಂಡ್ತಿ ಬೈಯ್ತಾ ಇದ್ಳು ಎಂದು ಸ್ಥಳೀಯ ನಿವಾಸಿ ಮಾದೇಶ್‌ ತಿಳಿಸಿದ್ದಾರೆ.

ಹೌದು. ಬೆಚ್ಚಿಬೀಳಿಸುವಂತ ಹತ್ಯಾಕಾಂಡ ಬೆಂಗಳೂರಿನಲ್ಲಿ ನಡೆದಿದೆ. ಕ್ಯಾಬ್‌ ಡ್ರೈವರ್‌  ಒಂದೇ ಕುಟುಂಬದ 7 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮಧ್ಯೆ ಸ್ಥಳೀಯ ನಿವಾಸಿಯೊಬ್ಬರು ಆರೋಪಿ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.

ಗಂಡ ಹೆಂಡತಿ ಮತ್ತು ಮಗು ಅಂತಾ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಹೆಂಡತಿ ಕೆಲಸಕ್ಕೆ ಹೋಗ್ತಾ ಇದ್ದರು. ರಾತ್ರಿ ಸಮಯದಲ್ಲಿ ಮಗಳ ಜೊತೆ ಬಂದು ಆಟ ಆಡ್ತಾ ಇದ್ದರು. ಆರೋಪಿ ಇಂದುಶೇಖರ್‌ ದಿನಾ ಬೆಳಗ್ಗೆ ಪ್ಯಾಂಟ್ ಬನಿಯನ್‌ನಲ್ಲಿ ಕಾರ್ ವಾಶ್ ಮಾಡುತ್ತಿದ್ದ. ಆದ್ರೆ ಅವನು ಮನೆಗೆ ಬರುವ ಹೋಗುವ ಸಮಯ ಗೋತ್ತಾಗುತ್ತಿರಲಿಲ್ಲ. ಆದ್ರೆ ತನ್ನ ಕ್ಯಾಬ್‌ಗೆ ಪ್ರೇಸ್ ಅಂತ ಹಾಕಿಸಿಕೊಂಡು ಜನರಿಗೆ ಬೆದರಿಕೆ ಹಾಕುತ್ತಿದ್ದ ಅಂತಾ ಹೇಳಿದ್ದಾರೆ.

ಗಂಡ ಹೆಂಡತಿ ನಡುವೆ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಹೆಂಡತಿ ನೀನು ಗಂಡ್ಸೆ ಅಲ್ಲ ಎಂದು ಬೈಯ್ತಾ ಇದ್ರು. ಆದರೀಗ ಘಟನೆ ತಿಳಿದು ನಮಗೆ ಶಾಕ್ ಆಯ್ತು. ಮಾಧ್ಯಮದಲ್ಲಿ ಸುದ್ದಿ ಬರುತ್ತಿರುವುದು ನೋಡಿ ನಮಗೂ ವಿಚಾರ ತಿಳಿಯಿತು. ಕಳೆದ ಮೂರು ದಿನಗಳ ಹಿಂದೆ ಮನೆ ಬಳಿ ಪೊಲೀಸರು ಬಂದು ಹೋಗಿದ್ದರು ಅಂತಾ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಂಗ್ಳೂರು ಸರಣಿ ಹತ್ಯೆ ಕೇಸ್ – ನರಹಂತಕ ಇಂದುಶೇಖರ್ 14 ದಿನ ಪೊಲೀಸ್‌ ಕಸ್ಟಡಿಗೆ

Spread the loveಬೆಂಗಳೂರು: ನಗರದಲ್ಲಿ  ನಡೆದ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ