Breaking News

ಪರೋಕ್ಷವಾಗಿ ಶಾಸಕ ಯತ್ನಾಳರಿಗೆ ತಿವಿದ ಸಚಿವ ಎಂ.ಬಿ.ಪಾಟೀಲ

Spread the love

ವಿಜಯಪುರ: ರಾಜ್ಯಪಾಲರು ಬಿಜೆಪಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಈ ರೀತಿ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.. ರಾಜ್ಯಪಾಲರಿಂದ ಇನ್ನೇನೂ ನಿರೀಕ್ಷೆ ಮಾಡಲಾಗಲ್ಲಾ ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ‌.ಬಿ.ಪಾಟೀಲ ಕಿಡಿ ಕಾರಿದರು. ದ್ವೇಷ ಭಾಷಣ ವಿಧೇಯಕ ಗೌವರ್ನರ್ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ದ್ವೇಷ ಭಾಷಣ ವಿಧೇಯಕ ಹಿಂದೆ ಒಂದು ಧರ್ಮದ ಟಾರ್ಗೆಟ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ದ್ವೇಷ ಭಾಷಣ ಯಾರೇ ಮಾಡಲಿ, ನಮ್ಮ ಜಿಲ್ಲೆಯಲ್ಲೆ ಇದ್ದಾರೆ, ಅವರಷ್ಟೂ ದ್ವೇಷ ಭಾಷಣ ಯಾರೂ ಮಾಡಿಲ್ಲ ಮುಂಜಾನೆ, ಮಧ್ಯಾಹ್ನ, ಸಂಜೆ, ರಾತ್ರಿ ದ್ವೇಷ ಭಾಷಣ ಮಾಡ್ತಾರೆ, ಅವರು ಯಾವ ಸಮಾಜದವರು..!! ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ತಾರೆ ಎಂದು ವ್ಯಂಗ್ಯವಾಡಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ