Breaking News

ಬೆಳಗಾವಿ ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 5 ಲಕ್ಷ ಮೌಲ್ಯದ ಅಫೀಮ್ ಜಪ್ತಿ

Spread the love

ಬೆಳಗಾವಿ: ರಾಜಸ್ಥಾನದ ಪಾಲಿಯಿಂದ ತಂದು ಬೆಳಗಾವಿಯ ಹಿಂಡಾಲ್ಕೋ ಫ್ಯಾಕ್ಟರಿ ಸಮೀಪ ಎನ್.ಹೆಚ್ 48 ಹೆದ್ದಾರಿಯ ಸರ್ವಿಸ್ ರಸ್ತೆಯ ಹತ್ತಿರ  ಅಫೀಮ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.‌

ರಾಜಸ್ಥಾನದ ಮೂಲದ ರೋಪಿತನಾದ ಶುಭಂ ಮದನಲಾಲ ಶರ್ಮ (29) ಎಂಬಾತನನ್ನು ಬಂಧಿಸಲಾಗಿದೆ.‌ ಈತ ಖೇತಾರಾಮ ಚೌಧರಿ ಎಂಬುವ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ವಿಭಾಗದ ಪಿಐ ರವರಾದ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದಾರೆ.ದಾಳಿ ವೇಳೆ 5,00,000 ರೂ. ಮೌಲ್ಯದ 1.048 ಕಿಲೋ ಗ್ರಾಂ ಬ್ಲ್ಯಾಕ್ ಕಲರ್ ಲಿಕ್ವಿಡ್ ಅಫೀಮ್, 50,000 ರೂ. ಮೌಲ್ಯದ ಐಫೋನ್ -14 ಪ್ಲಸ್ ಮೋಬೈಲ್ ಜಪ್ತಪಡಿಸಲಾಗಿದೆ.

ಆರೋಪಿತರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಪ್ರ ಸಂ.139/2026 ಕಲಂ. 18(b) ಎನ್.ಡಿ.ಪಿ.ಎಸ್ ಕಾಯ್ದೆ-1985 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ದಾಳಿ ಕೈಗೊಂಡ ಪಿಐ, ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ