Breaking News

ಎಸ್‌ಐಆರ್ ಪ್ರಕ್ರಿಯೆಗೆ ಮರಾಠಿ ನಮೂನೆಗಳನ್ನೇ ಬಳಸಬೇಕು: ಕೊಂಕು ತೆಗೆದ ಎಂಇಎಸ್

Spread the love

ಬೆಳಗಾವಿ : ಜಿಲ್ಲೆಯ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮರಾಠಿ ನಮೂನೆಗಳನ್ನೇ ಬಳಸಬೇಕು. ಮರಾಠಿ ಪ್ರತಿಗಳು ಲಭ್ಯವಾಗುವವರೆಗೂ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಎಂಇಎಸ್ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು  ಆಗ್ರಹಿಸಿದೆ.
ಈ ಸಂಬಂಧ ಶುಕ್ರವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದ ಪಾಲಿಕೆಯ ಎಂಇಎಸ್ ಹಾಲಿ ಮತ್ತು ಮಾಜಿ ಸದಸ್ಯರು ಮತ್ತು ಮುಖಂಡರು, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ದಕ್ಷಿಣ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಈ ಹಿಂದೆಯೇ ಮರಾಠಿಯನ್ನು  ಭಾರತದ ಚುನಾವಣಾ ಆಯೋಗವು ಅನುಮೋದಿತ ಭಾಷೆಯಾಗಿ ಪರಿಗಣಿಸಿದೆ. ಈ ಹಿಂಧೆ ಮತದಾರರ ಪಟ್ಟಿ ಮತ್ತು ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳಿಗಳನ್ನು ಮರಾಠಿಯಲ್ಲೇ ನೀಡಿದ್ದಾರೆ. ಆದರೆ ಈಗ ಎಸ್‌ಐಆರ್ ಪ್ರಕ್ರಿಯೆಗೆ ಪೂರೈಸಲಾಗಿರುವ ಗಣತಿ ನಮೂನೆಗಳು ಕನ್ನಡದಲ್ಲಿ ಮಾತ್ರ ಲಭ್ಯವಿವೆ. ಈ ಮೂಲಕ ಮರಾಠಿ ಭಾಷಿಕ ಮತದಾರರನ್ನು ಪ್ರಕ್ರಿಯೆಯಿಂದಲೇ ದೂರು ಇಡುವ ಸಂಚು ನಡೆದಿದೆ ಎಂದು ಆರೋಪಿಸಿದರು.
ಸದ್ಯ ನಡೆದಿರುವ ಎಸ್‌ಐಆರ್ ನಮೂನೆಗಳನ್ನು ಕನ್ನಡದ ಜತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲೂ ನೀಡಬೇಕು ಎಂದು ಆಗ್ರಹಿಸಿ  ಅನಗೋಳದ ನಿವಾಸಿಗಳು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಮತದಾರರ ಪರಿಶೀಲನಾ ನಮೂನೆ ಪಡೆದುಕೊಂಡಿದ್ದೇವೆ. ನಗರದಲ್ಲಿ ಕನ್ನಡದ ಜತೆಗೆ ಮರಾಠಿ ಮಾತನಾಡುವವರೂ ಇದ್ದಾರೆ. ಹೀಗಾಗಿ, ಕನ್ನಡದ ಜತೆಗೆ ಇಂಗ್ಲಿಷ್ ಮತ್ತು ಮರಾಠಿಯಲ್ಲೂ ನಮೂನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿನಾಯಕ ಗುಂಜಟಕರ, ಬಾಹು ಕಾವಳೆ, ಚಂದ್ರಕಾಂತ ಗೊಂಡವಾಡ್ಕರ, ಜ್ಯೋತಿಬಾ ಯಳ್ಳೂರಕರ, ಪರಮೇಶ ಶಿಂಧೆ, ಓಂಕಾರ ಚೌಗಲೆ, ವಿನಯ ರಾಜಗೋಳಕರ  ಇತರರಿದ್ದರು.

Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ