Breaking News
Home / Uncategorized / ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆ ಈ ವಷ೯ರದ್ದು

ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆ ಈ ವಷ೯ರದ್ದು

Spread the love

 

ಮೂಡಲಗಿ: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಈ ಬಾರಿಯ ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆಯನ್ನು , ಪ್ರಾಥನೆಯನ್ನು ಎಲ್ಲರೂ ತಮ್ಮ ಮನೆಗಳಲ್ಲಿಯೇ ಸರಳವಾಗಿ ಆಚರಿಸಬೇಕು ಎಂದು ಭಜನಾ ಮಂಡಳಿ ಸದಸ್ಯ ಬಸವರಾಜ ರಂಗಾಪೂರ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಜನಾ ಕಾಯ೯ಕ್ರಮವು ಪ್ರತಿ ವಷ೯ ಈ ವಷ೯ವೂ ಅದ್ಧೂರಿಯಾಗಿ ಆಚರಿಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ 19 ವೈರಸ್‌ದಿಂದಾಗಿ ಸಾರ್ವಜನಿಕವಾಗಿ ಆಚರಣೆ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.
ವೈರಸ್‌ ಹಬ್ಬದಂತೆ ತಡೆಯುವ ಸಲುವಾಗಿ ಸರ್ಕಾರ ರೂಪಿಸಿರುವ ಎಲ್ಲ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಮನೆಗಳಲ್ಲಿಯೇ ಓಂಕಾರ ಭಜನೆ ಮಾಡಲು ವಿನಂತಿಸಿದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ