Home / new delhi / ಕೊರೋನಾ ಭಯವಿಲ್ಲದೆ ಬೆಳ್ಳಂಬೆಳಗ್ಗೆ ಮಾಂಸ ಖರೀದಿಗೆ ಮುಗಿಬಿದ್ದ ಜನ..!

ಕೊರೋನಾ ಭಯವಿಲ್ಲದೆ ಬೆಳ್ಳಂಬೆಳಗ್ಗೆ ಮಾಂಸ ಖರೀದಿಗೆ ಮುಗಿಬಿದ್ದ ಜನ..!

Spread the love

ಬೆಂಗಳೂರು, : ನಾಳೆ ಸೋಮವಾರ… ಮಂಗಳವಾರ ಶ್ರಾವಣ ಪ್ರಾರಂಭ… ನಾನ್‍ವೆಚ್ ತಿನ್ನಂಗಿಲ್ಲ… ಏನೇ ಆದ್ರೂ ಇವತ್ತು ತಿನ್ನಲೇಬೇಕು… ಕೊರೊನಾ ಒಂದು ಕಡೆ ಇರಲಿ ಎಂಬಂತೆ ನಾನ್‍ವೆಜ್ ಪ್ರಿಯರು ಇಂದು ಬೆಳ್ಳಂಬೆಳಗ್ಗೆ ಮಾಂಸ ಖರೀದಿಗಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ನಗರದಲ್ಲಿ ಕಂಡುಬಂದವು.

ಮಹಾಮಾರಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದರೂ ಸಹ ನಾನ್‍ವೆಜ್ ಪ್ರಿಯರು ಬೆಳ್ಳಂಬೆಳಗ್ಗೆ ಚಿಕನ್, ಮಟನ್ ಹಾಗೂ ಫಿಷ್ ಖರೀದಿಸಲು ಅಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತಿದ್ದರು.

 

ಲಾಕ್‍ಡೌನ್ ಜಾರಿಯಲ್ಲಿದೆ. ಅಲ್ಲದೆ ಇಂದು ಸಂಡೆ ಲಾಕ್‍ಡೌನ್ ಕೂಡ ಇದ್ದು, ಮುಂಜಾನೆಯಿಂದಲೇ ನಾನ್‍ವೆಜ್ ಪ್ರಿಯರು ಭಾನುವಾರದ ಬಾಡೂಟಕ್ಕಾಗಿ ನಗರದ ವಿವಿಧ ಮಾಂಸದ ಅಂಗಡಿಗಳ ಮುಂದೆ ಖರೀದಿಗಾಗಿ ಮುಗಿಬಿದ್ದಿದ್ದಾರೆ.
ವಿಜಯನಗರ, ಶಿವಾಜಿನಗರ, ಮೂಡಲಪಾಳ್ಯ, ಕಮಲಾನಗರ, ಮಂಜುನಾಥನಗರ, ನಾಗರಭಾವಿ, ಮೈಸೂರು ರಸ್ತೆ, ಯಶವಂತಪುರ, ಜಯನಗರ, ಮಲ್ಲೇಶ್ವರಂ ಸೇರಿದಂತೆ ನಗರದ ವಿವಿಧೆಡೆ ಚಿಕನ್, ಮಟನ್ ಹಾಗೂ ಫಿಷ್ ಖರೀದಿಗಾಗಿ ಜನರು ಮುಗಿಬಿದ್ದಿದ್ದರು.

ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ತಾ ಮುಂದು ನಾ ಮುಂದು ಎನ್ನುವಂತೆ ಮಾಂಸ ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರವನ್ನೇ ಕೆಲವು ಕಡೆ ಸಾರ್ವಜನಿಕರು ಮರೆತಿದ್ದರು.

ನಮಗೆ ಮಾಂಸ ದೊರೆತರೆ ಸಾಕು. ಇನ್ನು ನಾಳೆಯಿಂದ ಶ್ರಾವಣ ಬೇರೆ. ಕೆಲವರು ಈ ಸಮಯದಲ್ಲಿ ನಾನ್‍ವೆಚ್ ತಿನ್ನುವುದಿಲ್ಲ. ಹಾಗಾಗಿ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದರು.

ಮಾಂಸ ಖರೀದಿ ದೃಶ್ಯಗಳು ಬೆಂಗಳೂರಿನಲ್ಲಿ ಅಲ್ಲದೆ ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಕಂಡುಬಂದವು. ತುಮಕೂರು, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಇದೇ ದೃಶ್ಯಗಳು ಕಂಡುಬಂದವು. ಒಟ್ಟಿನಲ್ಲಿ ಆರೋಗ್ಯಕ್ಕಿಂತ ನಾನ್‍ವೆಜ್ಜೇ ಹೆಚ್ಚಾಯಿತೇ? ಎಂಬ ಮಾತುಗಳು ಕೇಳಿಬಂದವು.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Spread the love ಬೇಸಗೆ ಝಳದಲ್ಲಿ ಬೇಯುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಕಾವೂ ಹೆಚ್ಚಿದ್ದು, ರಾಜಧಾನಿಯ ಗದ್ದುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ