Breaking News
Home / ಜಿಲ್ಲೆ / ಬೆಳಗಾವಿ / ಲಾಕ್ ಡೌನ್: ಅಬಕಾರಿ ದಾಳಿ-ಕಳ್ಳಬಟ್ಟಿ, 2- ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 78800 ಸಾವಿರ ಮೌಲ್ಯದ ವಸ್ತು ಜಪ್ತಿ

ಲಾಕ್ ಡೌನ್: ಅಬಕಾರಿ ದಾಳಿ-ಕಳ್ಳಬಟ್ಟಿ, 2- ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 78800 ಸಾವಿರ ಮೌಲ್ಯದ ವಸ್ತು ಜಪ್ತಿ

Spread the love

    ಬೈಲ್ ಹೊಂಗಲ್:  ಲಾಕ್ ಡೌನ್: ಅಬಕಾರಿ ದಾಳಿ-ಕಳ್ಳಬಟ್ಟಿ, 2- ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 78800 ಸಾವಿರ ಮೌಲ್ಯದ ವಸ್ತು ಜಪ್ತಿ.

ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟಿ
ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳನ್ನು ತಡೆಯಲು ಜಿಲ್ಲಾ ಅಬಕಾರಿ ಇಲಾಖೆಯು ತಂಡಗಳನ್ನು ರಚಿಸಿದ್ದು.

ಈ ಸಂದರ್ಭದಲ್ಲಿ ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು-ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ,ವಾಹನಗಳನ್ನು ತಪಾಸಣೆ ನಡೆಸಿ, ಅಕ್ರಮ ಮದ್ಯ, ಕಳ್ಳಭಟ್ಟಿ ಸಾಗಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿರುತ್ತಿದೆ. ಎಂದು ಅಬಕಾರಿ ನಿರೀಕ್ಷಕರಾದ ರವಿ ಮುರಗೋಡ ಇವರು ತಿಳಿಸಿದರು‌.

ಏಪ್ರಿಲ್-28 ರಂದು ರಂದು ಖಚಿತ ಮಾಹಿತಿಯ ಆಧಾರದ ಮೇರೆಗೆ ಬೈಲಹೊಂಗಲ ತಾಲೂಕಿನ ಹಳೆ ರಂಗೋಲಿ ಕಾರ್ಖಾನೆಯ ಹತ್ತಿರ ಅಕ್ರಮ ಕಳ್ಳಬಟ್ಟಿಯನ್ನು ಸಾಗಿಸುತ್ತಿರುವ ಮಾಹಿತಿಯನ್ನು ಆಧರಿಸಿ, ಬೈಲಹೊಂಗಲ ಅಬಕಾರಿ ನಿರಿಕ್ಷಕರಾದ ರವಿ ಮುರಗೋಡ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕಾರದ ಬಸವರಾಜ ಕರವಿನಕೊಪ್ಪ್ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡ ರಚಿಸಿ ಅಕ್ರಮ ಕಳ್ಳಭಟ್ಟಿಯನ್ನು ಸಾಗಿಸುತ್ತಿದಂತಹ ಬಾಳಪ್ಪ ಕೆಂಚನ್ನವರ ಆರೋಪಿಯನ್ನು ಬಂದಿಸಿ 2- ದ್ವಿಚಕ್ರ ವಾಹನ ಹಾಗೂ 18800 ಮೌಲ್ಯದ ಕಳ್ಳಭಟ್ಟಿ ಸರಾಯಿ ಮದ್ಯವನ್ನು ವಶಪಡಿಸಿಕೊಂಡು ನ್ಯಾಯಲಯದ ವಶಕ್ಕೆ ನೀಡಿರುತ್ತಾರೆ. ಎಂದು ಬೈಲಹೊಂಗಲ ವೃತ್ತದ ಅಬಕಾರಿ ನಿರೀಕ್ಷಕರಾದ ರವಿ ಮುರಗೋಡ ಇವರು ಮಾದ್ಯಮಗಳಿಗೆ ಮಾಹಿತಿ ನೀಡಿದರು.


Spread the love

About Laxminews 24x7

Check Also

ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ, ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್

Spread the love ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು , ರಾಜ್ಯದ 17 ಮಂದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ