Breaking News
Home / ನವದೆಹಲಿ / ಭಾರತದಲ್ಲಿ ಲಾಕ್‍ಡೌನ್ 3.0 ಫಿಕ್ಸ್..! ವಿಸ್ತರಣೆಗೆ ಕೆಲವು ರಾಜ್ಯಗಳಿಂದ ಇಂಗಿತ …………

ಭಾರತದಲ್ಲಿ ಲಾಕ್‍ಡೌನ್ 3.0 ಫಿಕ್ಸ್..! ವಿಸ್ತರಣೆಗೆ ಕೆಲವು ರಾಜ್ಯಗಳಿಂದ ಇಂಗಿತ …………

Spread the love

ನವದೆಹಲಿ-ಮುಂಬೈ, ಏ.24-ಲಾಕ್‍ಡೌನ್ ವಿಸ್ತರಣೆಯ ಎರಡನೇ ಹಂತದಲ್ಲೂ ಕೊರೊನಾ ಹಾವಳಿ ಕಳವಳಕಾರಿ ಮಟ್ಟದಲ್ಲಿ ಮುಂದುವರಿದಿದೆ. ಕೋವಿಡ್-19 ವೈರಸ್‍ನನ್ನು ನಿಯಂತ್ರಿಸಲು ಮತ್ತೆ ಲಾಕ್‍ಡೌನ್ ವಿಸ್ತರಿಸಬೇಕೆಂಬ ಇಂಗಿತವನ್ನು ಕೆಲವು ರಾಜ್ಯಗಳು ವ್ಯಕ್ತಪಡಿಸಿವೆ. ಆದರೆ ಕೆಲವು ರಾಜ್ಯಗಳು ವಿಸ್ತರಣೆ ಬಗ್ಗೆ ಭಿನ್ನ ನಿಲುವು ಹೊಂದಿವೆ.

ಈ ಬೆಳವಣಿಗೆಯಿಂದಾಗಿ ಮೇ 3ರ ನಂತರವೂ ಲಾಕ್‍ಡೌನ್ ವಿಸ್ತರಣೆ ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದೊಳಗೆ ಮೂರನೇ ಬಾರಿ ಲಾಕ್‍ಡೌನ್‍ನನ್ನು ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಒಡಿಶಾ ರಾಜ್ಯಗಳು ಮೇ 16ರವರೆಗೂ ಲಾಕ್‍ಡೌನ್ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿವೆ. ಆರು ರಾಜ್ಯಗಳಾದ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ತಾನು ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದಾಗಿ ತಿಳಿಸಿವೆ.

ಇನ್ನೊಂದೆಡೆ, ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ನಾಳೆ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಸೋಮವಾರ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಆನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಕೆಲ ರಾಜ್ಯಗಳು ಹೇಳಿವೆ.

ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವ ತೆಲಂಗಾಣ ರಾಜ್ಯ ಸರ್ಕಾರ ಈಗಾಗಲೇ ಲಾಕ್‍ಡೌನ್ ಅವಧಿಯನ್ನು ಮೇ7ರವರೆಗೂ ವಿಸ್ತರಿಸಿದೆ. ಈ ಮೂಲಕ ಮೂರನೇ ಬಾರಿ ಲಾಕ್‍ಡೌನ್ ವಿಸ್ತರಣೆ ಮಾಡಿದ ದೇಶದ ಪ್ರಥಮ ರಾಜ್ಯವಾಗಿದೆ

ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವು ಪ್ರಕರಣ ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ ಮೇ 25ರಿಂದ ಏ.14ರವರೆಗೆ ಮೊದಲ ಲಾಕ್‍ಡೌನ್ ಜಾರಿಗೊಳಿಸಿದ್ದರು. ನಂತರ ಅದನ್ನು ಮೇ 3ರವರೆಗೂ ವಿಸ್ತರಿಸಿದ್ದರು.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ