Breaking News

ಖಾನಾಪುರದ ಇಬ್ಬರು ಯುವಕರು ನೀರುಪಾಲ, ಬ್ಬರು ಯುವಕರ ಶವಗಳು ಪತ್ತೆ

Spread the love

ಬೆಳಗಾವಿ: ಪಿಕ್‍ನಿಕ್ ಮಾಡಲು ಹೋಗಿದ್ದ ಖಾನಾಪುರದ ಇಬ್ಬರು ಯುವಕರು ನೀರುಪಾಲಾದ ಘಟನೆ ಖಾನಾಪುರದ ಅಸೋಗಾ ಬಳಿ ಇರುವ ಹಾಲತ್ರಿ ಹಳ್ಳದ ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ನಡೆದಿದೆ.

ಮೃತ ಯುವಕರನ್ನು ಉಮರ್ ಖಲೀಫ್(16), ಅರಘಾತ ಅರಘಾಟಿ(16) ಎಂದು ಗುರುತಿಸಲಾಗಿದ್ದು, ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಖಾನಾಪುರ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು, ಕಾರ್ಯಾಚರಣೆಯಲ್ಲಿ ನಿನ್ನೆ ಪೊಲೀಸರಿಗೆ ಇಬ್ಬರು ಯುವಕರ ಬಟ್ಟೆ, ಮತ್ತು ಮೊಬೈಲ್ ಫೋನ್‍ಗಳು ಹಾಲತ್ರಿ ಹಳ್ಳದ ಬಳಿ ಪತ್ತೆಯಾಗಿದ್ದವು.

ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಯುವಕರು ಪತ್ತೆಯಾಗಿರಲಿಲ್ಲ, ಇಂದು ಬೆಳಿಗ್ಗೆ ಇಬ್ಬರು ಯುವಕರ ಶವಗಳು ಪತ್ತೆಯಾಗಿದ್ದು, ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ