Breaking News

ಗ್ರಾಮ ಪಂಚಾಯ್ತಿ ಗ್ರಂಥಾಲಯ ಮುಂಭಾಗ ಸತ್ತ ನಾಯಿ : ತೆರವುಗೊಳಿಸದ ಗ್ರಾಮ ಪಂಚಾಯಿತಿ ಆಡಳಿತ

Spread the love

ಗ್ರಾಮ ಪಂಚಾಯ್ತಿ ಗ್ರಂಥಾಲಯ ಮುಂಭಾಗ ಸತ್ತ ನಾಯಿ : ತೆರವುಗೊಳಿಸದ ಗ್ರಾಮ ಪಂಚಾಯಿತಿ ಆಡಳಿತ

ಬಂಗಾರಪೇಟೆ ತಾಲ್ಲೂಕು ಹುಲಿಬೆಲೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮುಂಭಾಗ ನಿನ್ನೆ ರಾತ್ರಿ ನಾಯಿಯೊಂದು ಸತ್ತಿದ್ದು, ಇದುವರೆಗೂ ತೆರವುಗೊಳಿಸುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ.

ವಿಪರ್ಯಾಸ ಎಂದರೆ ನಾಯಿ ಸತ್ತ ಸ್ಥಳದಲ್ಲೇ ಅಂಗನವಾಡಿ ಕೇಂದ್ರವಿದ್ದು, ವಾಸನೆಯಿಂದ ಮಕ್ಕಳು ಹೈರಾಣಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗನವಾಡಿ ಕಾರ್ಯಕರ್ತೆ, ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ. ಸತ್ತ ನಾಯಿ ತೆರವುಗೊಳಿಸಲು ಗ್ರಾಮದ ತೋಟಿಗರಿಗೆ ಹೇಳಲಾಗಿದೆ. ಇನ್ನು ಬಂದಿಲ್ಲ ಎಂದು ಹೇಳಿದರು.

ಅಂಗನವಾಡಿ ಕೇಂದ್ರ ಮುಂಭಾಗ ನಾಯಿ ಸತ್ತು ದುರ್ವಾಸನೆ ಬೀರುತ್ತಿದೆ. ಮಕ್ಕಳು ವಾಸನೆಯಿಂದ ಹೈರಾಣಾಗಿದ್ದರೂ ಸಹ ಗ್ರಾಮ ಪಂಚಾಯ್ತಿ ಇನ್ನು ತೆರವು ಮಾಡದಿರುವುದು ಬೇಸರದ ಸಂಗತಿಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ