Breaking News

ಮಕ್ಕಳು ಹೂ ಕಿತ್ತಿದ್ದಕ್ಕೇ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ದುಷ್ಟ!

Spread the love

ಬೆಳಗಾವಿ :‌ ಅಂಗನವಾಡಿಯ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿದ್ದ ಹೂ ಕಿತ್ತರೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಅಂಗನವಾಡಿ ಸಹಾಯಕಿಯಾಗಿ ಕೆಲಸಮಾಡುತ್ತಿದ್ದ ಮಹಿಳೆಯ ಮೂಗನ್ನು ಕುಡುಗೋಲಿನಿಂದ ಕತ್ತರಿಸಿರುವ ದುರ್ಘಟನೆ ಬಸುರ್ತೆ ಗ್ರಾಮದಲ್ಲಿ ನಡೆದಿದೆ. ಸುಗಂಧಾ ಮೋರೆ( 50) ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಕಲ್ಯಾಣಿ ಮೋರೆ ಈ ದುಷ್ಕೃತ್ಯ ಎಸಗಿದ್ದಾನೆ.

 

ಅಂಗನವಾಡಿ ಸಹಾಯಕಿಯಾಗಿ ಸುಗಂಧಾ ಕೆಲಸ ಮಾಡುತ್ತಿದ್ದರು. ಅವರ ಅಂಗನವಾಡಿಯ ಮಕ್ಕಳು ಕಲ್ಯಾಣಿ ಮೋರೆ ಮನೆಯ ಮುಂದಿರುವ ಮಲ್ಲಿಗೆ ಹೂ ಗಿಡದಿಂದ ಹೂ ಕಿತ್ತಿದ್ದರು. ಇದರಿಂದ ಕುಪಿತನಾಗಿದ್ದ‌ ಕಲ್ಯಾಣಿ ಮೋರೆ ಸುಗಂಧಾ ಅವರೊಡನೆ ಜಗಳ ತೆಗಿದಿದ್ದು, ಈಕೃತ್ಯ ಎಸಗಿದ್ದಾನೆ.

ಸುಗಂಧಾ ಅವರನ್ನುಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಶ್ವಾಸಕೋಶದೊಳಗೆ ರಕ್ತ ಸೇರಿಕೊಂಡು ಉಸಿರಾಟಕ್ಕೆ ತೊಂದರೆಯಾಗಿರುವ ಪರಿಣಾಮ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕಲ್ಯಾಣಿ ಮೋರೆ ಪರಾರಿಯಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the loveಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ