Breaking News
Home / Uncategorized / ಬೆಂಗಳೂರು: ಶಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಕ ರಘು ದೀಕ್ಷಿತ್ ಅವರು ಹೇಳಿದ್ದಾರೆ.

ಬೆಂಗಳೂರು: ಶಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಕ ರಘು ದೀಕ್ಷಿತ್ ಅವರು ಹೇಳಿದ್ದಾರೆ.

Spread the love

ಬೆಂಗಳೂರು: ಶಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಕ ರಘು ದೀಕ್ಷಿತ್ ಅವರು ಹೇಳಿದ್ದಾರೆ.

ಲವ್ ಮಾಕ್‍ಟೇಲ್ 2020ರ ಜನವರಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಯಶಸ್ಸಿನ ಬೆನ್ನಲೇ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್‍ಟೇಲ್ ಸಿನಿಮಾದ ಸಿಕ್ವೇಲ್ ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ಲಾಕ್‍ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಕೃಷ್ಣ ರೆಡಿ ಮಾಡಿದ್ದಾರೆ ಲವ್ ಮಾಕ್‍ಟೇಲ್ ಚಿತ್ರಕ್ಕೆ ರಘು ದೀಕ್ಷಿತ್ ಅವರು ಸಂಗೀತ ನೀಡಿದ್ದರು. ಇದೇ ತಂಡವನ್ನು ಇಟ್ಟಿಕೊಂಡು ಕೃಷ್ಣ ಲವ್ ಮಾಕ್‍ಟೇಲ್-2 ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಚಿತ್ರದ ಕಥೆಯನ್ನು ಕೃಷ್ಣ ರಘು ಅವರಿಗೆ ಹೇಳಿದ್ದು, ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ರಘು ದೀಕ್ಷಿತ್, ಇಂದು ನಾನು ಲವ್ ಮಾಕ್‍ಟೇಲ್-2 ಚಿತ್ರದ ಕಥೆಯನ್ನು ಕೇಳಿದೆ. ಪಾರ್ಟ್-1ಗಿಂತ ಈ ಕಥೆ ಕೇಳಿ ನಾನು ತುಂಬಾ ಥ್ರಿಲ್ ಆದೆ. ಈ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಲವ್ ಮಾಕ್‍ಟೇಲ್ ಪಾರ್ಟ್-1 ಚಿತ್ರ ಬಿಡುಗಡೆಯಾಗಿ ಥೀಯೇಟರ್ ಸಮಸ್ಯೆಯದಾಗ ಚಿತ್ರತಂಡದ ನೆರವಿಗೆ ನಿಂತಿದ್ದ ರಘು ದೀಕ್ಷಿತ್ ಅವರು, ಸಿನಿಮಾ ನೋಡುವಂತೆ ಇನ್‍ಸ್ಟಾಗ್ರಾಮ್ ಮೂಲಕ ಕೇಳಿಕೊಂಡಿದ್ದರು. ಜೊತೆಗೆ ಒಳ್ಳೆಯ ಸಿನಿಮಾಗಳನ್ನು ನೀವು ಹೀಗೇ ಕೈಬಿಟ್ಟರೆ ಮುಂದೆ ಒಳ್ಳೆಯ ಸಿನಿಮಾ ಮಾಡಲು ನಿರ್ಮಾಪಕರು ಭಯಪಡುತ್ತಾರೆ ಎಂದು ಹೇಳಿದ್ದರು. ಆದರೆ ನಂತರ ಸಿನಿಮಾ ಒಳ್ಳೆಯ ಪ್ರತಿಕ್ರಿಯೇ ಪಡೆದು ಜನಮನ್ನಣೆ ಗಳಿಸಿತ್ತು.

ಲವ್ ಮಾಕ್‍ಟೇಲ್ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಲವ್ ಮಾಕ್‍ಟೇಲ್-2 ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಪಾರ್ಟ್ ಒಂದರಲ್ಲಿ ಕಾಣಿಸಿಕೊಂಡ ಯಾವ ಯಾವ ಪಾತ್ರಗಳು ಪಾರ್ಟ್ ಎರಡರಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಇನ್ನೂ ಬಹಿರಂಗವಾಗಿಲ್ಲ. ಆದರೆ ಚಿತ್ರದಲ್ಲಿ ನಾಯಕನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಮತ್ತು ಸುಷ್ಮಾ ಪಾತ್ರಗಳು ಹಾಗೇ ಇರಲಿವೆ ಎಂದು ಹೇಳಲಾಗಿದೆ. ಆದರೆ ಸಾವನ್ನಪ್ಪಿದ ನಿದಿಮಾ, ಜೋ ಮತ್ತು ಅದಿತಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತಾಗಿಲ್ಲ.

ಲವ್‍ ಮಾಕ್‍ಟೇಲ್ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆದ ಕೂಡಲೇ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರವನ್ನು ತೆಲುಗಿನಲ್ಲಿ ಕನ್ನಡ ನಿರ್ದೇಶಕ ಮತ್ತು ನಟ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಹೀಗಾಗಲೇ ‘ಚುಕ್ಕಲ ಪಲ್ಲಕಿಲೋ’ ಎಂಬ ಟೈಟಲ್ ಕೂಡ ಇಡಲಾಗಿದೆ. ಆದರೆ ನಿದಿಮಾ, ಅದಿ ಮತ್ತು ಜೋ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ.


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ