Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಕೋರೊನಾ ವಿರುದ್ಧ ಹೋರಾಟಕ್ಕೆ ಜೀವದ ಹಂಗು ತೊರೆದ ಪೊಲೀಸರು, ಪತ್ರಕರ್ತರಿಗೂ ವಿಮೆ ಮಾಡಿಸಿ: ಸತೀಶ ಜಾರಕಿಹೊಳಿ

ಕೋರೊನಾ ವಿರುದ್ಧ ಹೋರಾಟಕ್ಕೆ ಜೀವದ ಹಂಗು ತೊರೆದ ಪೊಲೀಸರು, ಪತ್ರಕರ್ತರಿಗೂ ವಿಮೆ ಮಾಡಿಸಿ: ಸತೀಶ ಜಾರಕಿಹೊಳಿ

Spread the love

ಗೋಕಾಕ: ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ,ಪ್ಯಾರಾಮೆಡಿಕಲ್ ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವ ವಿಮೆ ಮಾಡಿಸಿದಂತೆ,ಪತ್ರಕರ್ತರಿಗೆ, ಪೋಲೀಸರಿಗೆ ವಿಮೆ ಮಾಡಿಸಬೇಕೆಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ನಗರದ ಹಿಲ್ ಗಾರ್ಡನ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸತೀಶ್ ಜಾರಕಿಹೊಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾರ್ವಜನಿಕರು ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು,ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿದ್ದು ಸೋಸಿಯಲ್ ಡಿಸ್ಟನ್ಸ್ ಕಾಪಾಡಬೇಕು ಎಂದು ಸತೀಶ್ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ