ಮೈಸೂರು: ಸಿಟಿ ಬಸ್ ನಿಲ್ದಾಣದ ಸಮೀಪ ಸಂಚಾರಿ ಪೊಲೀಸ್ ಪೇದೆ ದರ್ಪ ತೋರಿಸಿದ ಘಟನೆ ನಡೆದಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಪೊಲೀಸರ ಎದುರೇ ಸೀಟ್ ಪಿಕಪ್ ಮಾಡೋ ಖಾಸಗಿ ಬಸ್ ಗಳಿಗೆ ತಡೆ ಹಾಕದೆ ಸಂಚಾರಿ ಪೊಲೀಸ್, ಪ್ರಶ್ನಿಸಿದ ಸ್ಥಳೀಯರ ಮೇಲೆಯೇ ಆವಾಜ್ ಹಾಕಿದ್ದಾರೆ. ಖಾಸಗಿ ಬಸ್ ಗಳಿಂದ ಹಣ ಪಡೆದು ನೋ ಪಾರ್ಕಿಂಗ್ ನಲ್ಲಿ ಸೀಟ್ ಪಿಕಪ್ ಮಾಡುತ್ತಿರೋ ಬಗ್ಗೆ ಪ್ರಶ್ನಿಸಲಾಗಿದೆ.
ಬಸ್ ಗಳ ನಿಲುಗಡೆಯಿಂದ ಸಿಟಿ ಬಸ್ ನಿಲ್ದಾಣದ ಬಳಿ ನಿತ್ಯ ಸಂಚಾರ ಅಸ್ತವ್ಯಸ್ತವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಜನರ ಮೇಲೆಯೇ ರೇಗಿದ ಘಟನೆ ನಡೆದಿದೆ.
ಅರಮನೆ ಗೇಟ್ ಬಳಿ ನಿಂತು ಮೊಬೈಲ್ ಚಾಟಿಂಗ್ ನಡೆಸುವುದರಲ್ಲಿ ಸಂಚಾರ ಪೊಲೀಸ್ ಪೇದೆ ನಿರತರಾಗಿದ್ದ ವೇಳೆ, ಇದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಗೆ ಪೊಲೀಸ್ ಧಮಕಿ ಹಾಕಿದ್ದಾರೆ. ವೀಡಿಯೋ ಮಾಡಿದ್ದಕ್ಕೆ ಹಲ್ಲೆ ಮಾಡಲು ಯತ್ನಿಸಿರುವ ವಿಡಿಯೋ ಕೂಡ ಲಭ್ಯವಾಗಿದೆ. ಈ ವೇಳೆ ಯಾರಿಗೆ ಹೇಳ್ಕೋತೀಯೋ ಹೇಳ್ಕೋ… ಏನೂ ಮಾಡಕ್ಕಾಗಲ್ಲ ಅಂತಾ ಪೇದೆ ದರ್ಪ ತೋರಿದ್ದಾರೆ.