ಮುಂಬೈ: ಕೊ’ರೋ’ನಾ ದ ಹಾವಳಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊ’ರೋ’ನಾ ವೈ’ರಸ್ ನಿಂದ 71 ವರ್ಷದ ರೋಗಿಯೊಬ್ಬ ಮೃ’ತಪಟ್ಟಿ’ರುವ ಸುದ್ದಿ ವರದಿಯಾಗಿದೆ. ಮೂಲಗಳ ಪ್ರಕಾರ ವ್ಯಕ್ತಿಯೊಬ್ಬ ಸೌದಿ ಅರಬ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದ. ಆತನನ್ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು. ಆತನಲ್ಲಿ ಡಯಾಬಿಟಿಸ್ ಹಾಗು ಹೈಪರ್‌ಟೆನ್ಶನ್ ಕೂಡ ಇತ್ತು. ಆದರೆ ಮೃತನ ಸ್ಯಾಂಪಲ್‌ನ್ನ ಸದ್ಯ ನಾಗಪುರಕ್ಕೆ ಕಳಿಸಲಾಗಿದೆ. ಇನ್ನೂ ಕೊ’ರೋ’ನಾ ದಿಂದ ಸಾವನ್ನಾಗಿದೆ ಎಂಬ ಸ್ಪಷ್ಟನೆ ಸಿಕ್ಕಿಲ್ಲ.
ಭಾರತದಲ್ಲಿ ಇದುವರೆಗೆ ಈ ವೃದ್ಧನ ಸಮೇತ ಮೂರು ಜನರು ಮೃ’ತಪಟ್ಟಿ’ದ್ದಾರೆ. ಮಾರ್ಚ್ 12 ರಂದು ಕಲಬುರಗಿಯ 76 ವರ್ಷದ ವೃದ್ಧನಾದರೆ ದೆಹಲಿಯ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಭರ್ತಿಯಾಗಿದ್ದ ವಯೋವೃದ್ಧ ಮಹಿಳೆಯೊಬ್ಬಳು ಮಾರ್ಚ್ 13 ರಂದು ಕೊನೆಯುಸಿರೆಳೆದಿದ್ದರು. 72 ಗಂಟೆ ಕಳೆಯುವ ಹೊತ್ತಲ್ಲೇ ಮಹಾರಾಷ್ಟ್ರದ ಬುಲಢಾಣಾ ದಿಂದ ಮೂರನೆಯ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.
Check Also
ಸೈಫ್ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ
Spread the loveರಾಯಚೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್ ನಟಿ …