Breaking News

ಪೊಲೀಸರ ಸೋಗಿನಲ್ಲಿ ಬಂದು ಬಂಗಾರ ಕದ ಖದೀಮರು!!

Spread the love

ಗೋಕಾಕ ನಗರದ ನವೀನ್ ಪೆಗ್ ಬಾರ್ ವಿದ್ಯಾ ನಗರದಲ್ಲಿ ಹಾಡು ಹಗಲೇ ಖದೀಮರ ತಂಡವೊಂದು ಮಹಿಳೆಯನ್ನು ಅಡ್ಡಹಟ್ಟಿ ನಾವು ಪೊಲೀಸರಿದ್ದಿವಿ.. ನಿಮಗೆ ಎಷ್ಟು ಕೂಗಿದರೂ ಸಹ ನೀವು ಕೇಳಲಿಲ್ಲ. ನೀವು ಹೆಮ್ಮೆಟ್ ಯಾಕೆ ಹಾಕಿಲ್ಲ ಅಂತ ಮಹಿಳೆಯನ್ನು ಮಾತಿಗೆಳೆದು ಮೈ ಮೇಲೆ ಈ ರೀತಿ ಬಂಗಾರದ ಆಭರಣಗಳನ್ನು ಹಾಕಿಕೊಂಡು ತಿರುಗಾಡಬಾರದು ಎಂದು ಆಕೆಗೆ ಬುದ್ದಿವಾದ ಹೇಳಿದಂತೆ ಮಾಡಿತ್ತಲೇ ಇನ್ನೊಂದು ಬೈಕ್ ಮೇಲೆ ಬಂಗಾರದ ಆಭರಣ ಹಾಕಿಕೊಂಡು ಬಂದ ಕಳ್ಳರ ಗುಂಪಿನ ಮತ್ತೋರ್ವ ಸದಸ್ಯನ್ನೂ ಸಹ ಮಹಿಳೆಯ ಮುಂದೆಯೇ ನಕಲಿ ಪೊಲೀಸರು ಬೈದು ಅವನ ಮೈಲಿನ ಒಡವೆಯನ್ನು ತೆಗೆದು ಕೊಡುವಂತೆ ಸೂಚಿಸಿದ್ದಾರೆ. ಕಳ್ಳರ ಗುಂಪಿನ ಸದಸ್ಯನೇ ಆಗಿದ್ದ ಆತ ಮಹಿಳೆಯ ಮುಂದೆ ತನ್ನ ಮೈ ಮೇಲಿದ್ದ ಬಂಗಾರದ ವಸ್ತುಗಳನ್ನು ತೆಗೆದು ಪೊಲೀಸರ ಸೋಗಿನಲ್ಲಿದ್ದ ಖದೀಮರ ಕೈಗೆ ಇಟ್ಟಿದ್ದಾನೆ.

ಆಗ ಮಹಿಳೆಗೂ ಸಹ ನಿಮ್ಮ ಬಂಗಾರವನ್ನೂ ಸಹ ಕಳಚಿ ನಮ್ಮ ಕೈಲಿ ಕೊಡಿ ನಾವು ನಿಮ್ಮ ಮನೆಗೆ ತಲುಪಿಸುತ್ತೆವೆ ಅಂತ ಹೇಳಿದ್ದಾರೆ. ಆಗ ಮುಗ್ಧ ಮಹಿಳೆ ೩ ತೊಲ ಬಂಗಾರವನ್ನು ಖದೀಮರ ಕೈಗೆ ನೀಡುತ್ತಿದ್ದಂತೆ ಮೂವರು ಖದೀಮರು ಅಲ್ಲಿಂದ ಆ ಬಂಗಾರ ಎತ್ತಿಕೊಂಡು ಪರಾರಿಯಾಗಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ