Breaking News

ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ

Spread the love

ಚೆನ್ನೈ: ತಮಗೆ ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್​ ಅನ್ನು ಪ್ರಶ್ನಿಸಿ ಚಿತ್ರನಟ ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ.

ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನೀಕಾಂತ್​ ಕೋರ್ಟ್​ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದ್ದ ನೋಟಿಸನ್ನು ಅವರು ಪ್ರಶ್ನಿಸಿದ್ದರು.

ಕಳೆದ ಏಪ್ರಿಲ್​ನಿಂದ ಸೆಪ್ಟಂಬರ್​ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ ನೋಟಿಸ್​ನಲ್ಲಿ ತಿಳಿಸಲಾಗಿತ್ತು. ಆದರೆ ಲಾಕ್​ಡೌನ್​ ಹಾಗೂ ಕರೊನಾ ವೈರಸ್​ ಕಾರಣ ನೀಡಿದ್ದ ‘ಸೂಪರ್​ಸ್ಟಾರ್’​, ಈ ಅವಧಿಯಲ್ಲಿ ಯಾವುದೇ ಆದಾಯ ಇಲ್ಲ, ಆದ್ದರಿಂದ ತೆರಿಗೆ ಕಟ್ಟುವುದು ಕಷ್ಟ ಎಂದು ಕೋರ್ಟ್​ಗೆ ತಿಳಿಸಿದ್ದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ