Breaking News
Home / ರಾಜಕೀಯ / ರಾಜಕೀಯದ ಬಗ್ಗೆ ಕುತೂಹಲದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳಿಂದ ಶಾಕಿಂಗ್ ನ್ಯೂಸ್

ರಾಜಕೀಯದ ಬಗ್ಗೆ ಕುತೂಹಲದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳಿಂದ ಶಾಕಿಂಗ್ ನ್ಯೂಸ್

Spread the love

ಶಿರಸಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೇರಳಕಟ್ಟೆ ಗ್ರಾಮದ ಭೂದೇವಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಎದ್ದ ರಾಜಕೀಯ ವಿಪ್ಲವದ ಸುಖಾಂತ್ಯ ಕಾಣಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಬೆಂಬಲಿಸಿದ ಸ್ವಾಮೀಜಿಗಳನ್ನು ಕೋಡಿಮಠ ಶ್ರೀಗಳು ಬೆಂಬಲಿಸಿದ್ದಾರೆ.

ಬೇಟೆಗಾರನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಗೆ ಬಳಿ ಹಾದು ಹೋಗಿದ್ದ ವೇಳೆ ಅಲ್ಲಿಗೆ ಬಂದ ಬೇಟೆಗಾರ ಜಿಂಕೆ ಈ ದಿಕ್ಕಿನಲ್ಲಿ ಓಡಿಹೋಯಿತಾ ಎಂದು ಪ್ರಶ್ನಿಸುತ್ತಾನೆ. ಆತನಿಗೆ ನಿಜ ಹೇಳಿದರೆ ಜಿಂಕೆಯ ಸಾವಿಗೆ ಕಾರಣವಾಗಬೇಕಾಗುತ್ತದೆ. ದಿಕ್ಕು ತೋರಿಸಿದರೆ ಸುಳ್ಳು ಹೇಳಿದಂತಾಗುತ್ತದೆ. ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ, ಈಗಿನ ರಾಜಕೀಯ ಪರಿಸ್ಥಿತಿ ಸುಖಾಂತ್ಯ ಕಾಣಲಿದೆ ಎಂದು ಕೋಡಿಹಳ್ಳಿ ಶ್ರೀಗಳು ತಿಳಿಸಿದ್ದಾರೆ.

ಮುಂದಿನ ನವೆಂಬರ್ ನಿಂದ ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದ್ದು, ಜಾಗತಿಕವಾಗಿಯೂ ತಲ್ಲಣ ಸೃಷ್ಟಿಸಬಹುದು. ಆಗಸ್ಟ್ ಮೂರನೇ ವಾರದ ನಂತರ ಕೊರೊನಾ ಸೋಂಕು ಹೆಚ್ಚಾಗಬಹುದು. ರೋಗದಿಂದ ಮೃತಪಡುವವರಿಗಿಂತ ಭಯದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗಬಹುದು. ಜನ ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದ ಶ್ರೀಗಳು. ಭಾರಿ ಮಳೆ, ಗಾಳಿಯಿಂದ ಜಲಪ್ರಳಯ ಸಂಭವಿಸುವ ಸಾಧ್ಯತೆ ಇದೆ. ಪಂಚಭೂತಗಳಿಂದ ಅನಾಹುತ ಉಂಟಾಗಬಹುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 30 ಸದಸ್ಯರಿದ್ದಾರೆ.

Spread the loveಬೆಂಗಳೂರು: ರಾಜ್ಯದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 30 ಸದಸ್ಯರಿದ್ದಾರೆ. ಈ ಪೈಕಿ ಅರ್ಧಕ್ಕಿಂತಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ