Breaking News
Home / ರಾಜಕೀಯ / ಜನರನ್ನು ಮಕ್ಕಳ ರೀತಿಯಲ್ಲಿ ನೋಡಬೇಕು’; ಆಲೋಚನೆಗಳನ್ನು ಹಂಚಿಕೊಂಡ ಉಪೇಂದ್ರ

ಜನರನ್ನು ಮಕ್ಕಳ ರೀತಿಯಲ್ಲಿ ನೋಡಬೇಕು’; ಆಲೋಚನೆಗಳನ್ನು ಹಂಚಿಕೊಂಡ ಉಪೇಂದ್ರ

Spread the love

ನಟ ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪಿಸಿ ಅದರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದಲ್ಲಿ ಹೊಸ ಬದಲಾವಣೆ ತರಬೇಕು ಎನ್ನುವ ಕನಸನ್ನು ಅವರು ಕಂಡಿದ್ದಾರೆ. ಈಗ ಜನರೊಂದಿಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಉಪೇಂದ್ರ ಫೇಸ್​ಬುಕ್​ ಲೈವ್​ ಬಂದಿದ್ದರು. ಈ ವೇಳೆ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಯಾವ ಪಕ್ಷ ಬರುತ್ತದೆ, ಯಾರು ನಾಯಕ, ಯಾವ ಜಾತಿ ಎಂಬಿತ್ಯಾದಿ ನೋಡಿಕೊಂಡು ನಾವು ಮತ ಹಾಕುತ್ತಿದ್ದೇವೆ. ಆ ರೀತಿ ಆಗಬಾರದು. ಅದು ಸಂಪೂರ್ಣವಾಗಿ ಅಳಿಸಿ ಹೋಗಬೇಕು. ಮತ ಹಾಕುವಾಗ ಎಚ್ಚರಿಕೆಯಿಂದ ಇರಬೇಕು’ ಎಂದರು ಉಪೇಂದ್ರ.

ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದರು. ಈ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದಾರೆ. ‘ನಾವು ಅಧಿಕಾರಕ್ಕೆ ಬಂದರೆ ಜನರೇ ಸಿಎಂ ಆಗುತ್ತಾರೆ. ಜನಸಾಮಾನ್ಯನೇ ಸಿಎಂ’ ಎಂದು ಹೇಳುವ ಮೂಲಕ ಜನರ ಮಾತಿಗೆ ಬೆಲೆ ಕೊಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದರು.

‘ಎಲೆಕ್ಷನ್​ ಟೈಮ್​ನಲ್ಲಿ ರಾಜಕಾರಣಿಗಳು ಬಂದು ನಾವು ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ. ನಂತರ ಮಾಡುವುದಿಲ್ಲ. ಇದು ಜನರಿಗೆ ಅಭ್ಯಾಸವಾಗಿದೆ. ಪ್ರಜೆಗಳಿಗೆ ರಾಜರಾಗಿರಬೇಕು ಎಂಬುದು ನಮ್ಮ ಉದ್ದೇಶ. ಇದೆಲ್ಲವೂ ಸಾಧ್ಯವಿದೆ’ ಎಂದು ಉಪೇಂದ್ರ ಅಭಿಪ್ರಾಯಪಟ್ಟರು.

 

‘ಜನರಲ್ಲಿ ಒಂದು ನಂಬಿಕೆ ಬರಬೇಕು. ಆ ನಂಬಿಕೆ ಬರುವ ಕೆಲಸವನ್ನು ನಾವು ಮಾಡಬೇಕು. ಇಲ್ಲಿ ಪ್ರತಿಯೊಬ್ಬರೂ ಬದಲಾಗಬೇಕು. ಏನೇ ಸಮಸ್ಯೆ ಆದರೂ, ನಮ್ಮ ಪಕ್ಷದಿಂದ ಗೆದ್ದು ಯಾರೂ ಕೆಲಸ ಮಾಡದೆ ಇದ್ದರೆ ಅಂಥ ಸಂದರ್ಭದಲ್ಲಿ ನಾನು ಬರುತ್ತೇನೆ’ ಎಂದರು ಉಪೇಂದ್ರ.

ಉಪೇಂದ್ರ ಅವರು ಮತ್ತೆ ನಿರ್ದೇಶನಕ್ಕೆ ಇಳಿಯಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದಕ್ಕೆ ಉಪೇಂದ್ರ ಅವರ ಉತ್ತರ ನೀಡಿದ್ದಾರೆ. ‘ಕೊವಿಡ್​ನಿಂದ ಎಲ್ಲಾ ಕೆಲಸಗಳು ಮುಂದೂಡಲ್ಪಟ್ಟಿವೆ. ಸದ್ಯ, ಎಲ್ಲವೂ ಸಮಸ್ಥಿತಿಗೆ ಬರುತ್ತಿದೆ. ಹೀಗಾಗಿ, ಶೀಘ್ರವೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ನನ್ನ ನಿರ್ದೇಶನದ ಸಿನಿಮಾ ಶೀಘ್ರವೇ ಘೋಷಣೆ ಆಗಲಿದೆ’ ಎಂದರು.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ