Breaking News

10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ?: ಸಚಿವ ಈಶ್ವರಪ್ಪ

Spread the love

ಶಿವಮೊಗ್ಗ: ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಗರಂ ಆದ ಸಚಿವ ಕೆ.ಎಸ್.ಈಶ್ವರಪ್ಪ “ಪ್ರಿಂಟ್ ಮಾಡ್ತೀವಾ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು.

 

ರಾಜ್ಯದ ಜನ ಸಾಯುತ್ತದ್ದಾರೆ ಇಂತಹ ವೇಳೆ ಬಾಯಿಗೆ ಬಂದಂಗೆ ಟೀಕೆ ಮಾಡುತ್ತಿದ್ದಾರೆ. ಒಳ್ಳೆಯದಕ್ಕೆ ಒಂದಾದರೂ ಅಭಿನಂದನೆ ಸಲ್ಲಿಸಿದ್ದೀರಾ? ಟೀಕೆ ಮಾಡುವುದಕ್ಕೆ ವಿರೋಧ ಪಕ್ಷ ಇದೆ ಎನ್ನುವಂತಾಗಿದೆ. ರೋಗಿಗಳಿಗೆ ಅನುಕೂಲವಾಗುವ ನಿಟ್ಟನಲ್ಲಿ ಏನಾದರೂ ಸಲಹೆ ನೀಡಿದರೆ ಅದನ್ನು ಮಾಡುತ್ತೇವೆ ಎಂದು ಗುಡುಗಿದರು.

ನೂರು ವರ್ಷದ ನಂತರ ಇಂತಹ ಕಾಯಿಲೆ ಬಂದಿದ್ದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕೂಡ ನಿರೀಕ್ಷೆ ಮಾಡಿರಲಿಲ್ಲ. ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದರೆ ಬಾಯಿಗೆ ಬಂದಂಗೆ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ