Breaking News
Home / ರಾಜಕೀಯ / ಪಶ್ಚಿಮ ಬಂಗಾಳದಲ್ಲಿ TMC, ತಮಿಳುನಾಡಲ್ಲಿ DMKಗೆ ಮುನ್ನಡೆ; ಮುಗ್ಗರಿಸುತ್ತಾ ಬಿಜೆಪಿ?

ಪಶ್ಚಿಮ ಬಂಗಾಳದಲ್ಲಿ TMC, ತಮಿಳುನಾಡಲ್ಲಿ DMKಗೆ ಮುನ್ನಡೆ; ಮುಗ್ಗರಿಸುತ್ತಾ ಬಿಜೆಪಿ?

Spread the love

ಬೆಂಗಳೂರು: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಗೆ ಶುರುವಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಂಟಿಸಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಬ್ಯಾನರ್ಜಿ ಸರ್ಕಾರದತ್ತ ಈ ಬಾರಿಯೂ ಮತದಾರರು ವಾಲಿದ್ದು, ಬೆಳಗ್ಗೆ 10 ಗಂಟೆ ಹೊತ್ತಿಗೆ 102 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಬಿಜೆಪಿಯೂ ಪ್ರಬಲ ಪೈಪೋಟಿ ನೀಡುತ್ತಿದ್ದು 84 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 292 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಯಾವ ಪಕ್ಷ ಜನ ಬೆಂಬಲದೊಂದಿಗೆ ಮ್ಯಾಜಿಕ್​ ನಂಬರ್​ ದಾಟಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಇನ್ನು ದಕ್ಷಿಣದಲ್ಲಿ ತಮಿಳುನಾಡಲ್ಲಿ ಚುನಾವಣೋತ್ತರ ಸಮೀಕ್ಷೆಯೇ ನಿಜವಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಬಹುತೇಕ ಸಮೀಕೆಗಳು ಅಂದಾಜಿಸಿದಂತೆ ತಮಿಳುನಾಡಿನ ಜನ ಈ ಬಾರಿ ಡಿಎಂಕೆಗೆ ವಿಜಯಮಾಲೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಳಗ್ಗೆ 10 ಗಂಟೆ ವೇಳೆ ಡಿಎಂಕೆ ಮೈತ್ರಿ ಕೂಟ 112 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಡಿಎಂಕೆ ಮೈತ್ರಿಕೂಟ 83 ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆಯುಯತ್ತಿದೆ. ಎಐಡಿಎಂಕೆ ಜೊತೆ ಕೈ ಜೋಡಿಸಿರುವ ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ