Breaking News
Home / new delhi / ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.

ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.

Spread the love

ನವದೆಹಲಿ: ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಶನಿವಾರ ರಾತ್ರಿ ವೈದ್ಯ ಜೋಗಿಂದರ್ ಚೌಧರಿ ನಿಧನರಾಗಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಇವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು.

ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೌಧರಿ ಕುಟುಂಬಸ್ಥರು ಚಿಕಿತ್ಸೆಗಾಗಿ 3.4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರು ತಮ್ಮ ಅಸೋಸಿಯೇಶನ್ ನಿಂದ ಚಿಕಿತ್ಸೆಗೆ 2.4 ಲಕ್ಷ ರೂ. ಧನ ಸಹಾಯ ಮಾಡಿದ್ದರು.

ಚೌಧರಿ ಅವರ ತಂದೆ ರೈತರಾಗಿದ್ದು, ಮಗನ ಚಿಕಿತ್ಸೆಗೆ ನೆರವಾಗುವಂತೆ ಆಸ್ಪತ್ರೆ ಮಂಡಳಿಗೆ ಪತ್ರ ಬರೆದಿದ್ದರು. ಅಂಬೇಡ್ಕರ್ ಆಸ್ಪತ್ರೆ ಸಹ ಚೌಧರಿ ಚಿಕಿತ್ಸಾ ವೆಚ್ಚಕ್ಕೆ ವಿನಾಯ್ತಿ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಚೌಧರಿ ತಂದೆಯ ಪತ್ರಕ್ಕೆ ಸ್ಪಂದಿಸಿದ್ದ ಆಸ್ಪತ್ರೆ ಮಂಡಳಿ ಪೂರ್ಣ ಚಿಕಿತ್ಸೆ ವೆಚ್ಚ ಭರಿಸಲು ಮುಂದಾಗಿತ್ತು.

ಡಾಕ್ಟರ್ ಚೌಧರಿ ಮಧ್ಯಪ್ರದೇಶದ ಸಿಂಗರೌಲಿಯ ಮೂಲದವರಾಗಿದ್ದು, 2019 ನವೆಂಬರ್ ನಲ್ಲಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.

ಕಳೆದ ವಾರ ದೆಹಲಿಯ 42 ವರ್ಷದ ಡಾ.ಜಾವೇದ್ ಅಲಿ ಸಹ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಜಾವೇದ್ ಮೂರು ತಿಂಗಳಿನಿಂದ ರಜೆ ಪಡೆಯದೇ ಸೋಂಕಿತರ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಜಾವೇದ್ ಅಲಿ ನಿಧನದ ಕೇಜ್ರಿವಾಲ್ ಸರ್ಕಾರ ಕುಟುಂಬಕ್ಕೆ 1 ಕೋಟಿ ರೂ. ನೀಡುವದಾಗಿ ಘೋಷಿಸಿದೆ.


Spread the love

About Laxminews 24x7

Check Also

ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ