Breaking News

ಮಧ್ಯರಾತ್ರಿ ‘ಬಿಗ್‍ಬಾಸ್’ ಖ್ಯಾತಿಯ ಕವಿತಾ ಗೌಡ ಮನೆಗೆ ಹೋಗಿ ಚಂದನ್ ಸರ್ಪ್ರೈಸ್

Spread the love

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ ಮನೆಗೆ ಮಧ್ಯರಾತ್ರಿ ನಟ ಚಂದನ್ ಹೋಗಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಭಾನುವಾರ ಕವಿತಾ ಗೌಡ ಹುಟ್ಟುಹಬ್ಬ ಇತ್ತು. ಕೊರೊನಾ ಇರುವುದರಿಂದ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಟ ಚಂದನ್ 12 ಗಂಟೆಗೆ ಸರಿಯಾಗಿ ಕವಿತಾ ಗೌಡ ಮನೆಗೆ ಹೋಗಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

ಅಷ್ಟೇ ಅಲ್ಲದೇ ಕವಿತಾ ಗೌಡ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಕೊಟ್ಟಿದ್ದಾರೆ. “ಸ್ನೇಹಿತರ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಆಗಿ ಭೇಟಿ ನೀಡಿದ್ದೆ. ಎಷ್ಟೋ ವರ್ಷಗಳ ಬಳಿ ಭೇಟಿ ಆದಂತೆ ಎನಿಸಿತು” ಎಂದು ಬರೆದು,  ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇಬ್ಬರು ಸ್ನೇಹಿತರಾಗಿದ್ದಾರೆ. ಇವರಿಬ್ಬರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀಬಾರಮ್ಮ’ ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಚಿನ್ನು ಪಾತ್ರದಲ್ಲಿ ಕವಿತಾ ಗೌಡ, ಚಂದು ಪಾತ್ರದಲ್ಲಿ ಚಂದನ್ ಅಭಿನಯಿಸಿದ್ದರು. ಈ ಮೂಲಕ ಪ್ರೇಕ್ಷಕರಿಗೆ ಇವರಿಬ್ಬರು ಪರಿಚಿತರಾಗಿದ್ದಾರೆ.

ರಿಯಾಲಿಟಿ ಶೋ ಬಿಗ್‍ಬಾಸ್ ಮನೆಗೂ ಇವರಿಬ್ಬರು ಹೋಗಿದ್ದರು. ಆದರೆ ಬೇರೆ ಬೇರೆ ಸೀಸನ್‍ನಲ್ಲಿ ಹೋಗಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾದಲ್ಲೂ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಗುರುತಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ