Breaking News

ಮೊಬೈಲ್‌ ವ್ಯಾಲೆಟ್‌ ಮಿತಿ 2 ಲಕ್ಷ ರೂ.ಗೆ : ಆರ್‌ಬಿಐ ಆದೇಶ

Spread the love

ಹೊಸದಿಲ್ಲಿ : ಮೊಬೈಲ್‌ ವ್ಯಾಲೆಟ್‌ ಬಳಕೆದಾರರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನೀವು ವ್ಯಾಲೆಟ್‌ನಲ್ಲಿ 2 ಲಕ್ಷ ರೂ.ವರೆಗೆ ಇಟ್ಟುಕೊಳ್ಳಬಹುದು. ವ್ಯಾಲೆಟ್‌ನಲ್ಲಿ ಇಡ ಬಹುದಾದ ಮೊತ್ತದ ಮಿತಿಯನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗಳಿಗೆ ಏರಿಸಿ ಆರ್‌ಬಿಐ ಬುಧವಾರ ಆದೇಶ ಹೊರಡಿಸಿದೆ.

ಅಲ್ಲದೆ ಪೇಟಿಎಂ, ಫೋನ್‌ಪೇ, ಮೊಬಿವಿಕ್‌, ಗೂಗಲ್‌ಪೇ ಸೇರಿದಂತೆ ಪ್ರೀಪೇಯ್ಡ ಮೊಬೈಲ್‌ ವ್ಯಾಲೆಟ್‌ ಕಂಪೆನಿಗಳು ಕೂಡ ಶೀಘ್ರದಲ್ಲೇ ಸಂಪೂರ್ಣ ಕೆವೈಸಿ (ನೋ ಯುವರ್‌ ಕಸ್ಟಮರ್‌) ಪ್ರಕ್ರಿಯೆಯನ್ನು ಜಾರಿ ಮಾಡಬೇಕು ಎಂದೂ ಸೂಚಿಸಿದೆ.

ತಮ್ಮ ಗ್ರಾಹಕರನ್ನು ಗುರುತಿಸಲು ಮತ್ತು ದೃಢೀಕರಿಸಲು ಮೊಬೈಲ್‌ ಕಂಪೆನಿಗಳು ಹಾಗೂ ಹಣಕಾಸು ಸೇವಾ ಕಂಪೆನಿಗಳೂ ಕೆವೈಸಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾತೆ ತೆರೆಯುವಾಗ ಮಾತ್ರವಲ್ಲದೆ ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡುತ್ತಿರಬೇಕು. ಈ ಕುರಿತ ವಿಸ್ತೃತ ಸೂಚನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ವ್ಯಾಲೆಟ್‌ನಿಂದ ವ್ಯಾಲೆಟ್‌ಗೆ ಹಣ
ಆರ್‌ಬಿಐಯ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದರೆ, ಶೀಘ್ರದಲ್ಲೇ ನೀವು ಒಂದು ಡಿಜಿಟಲ್‌ ವ್ಯಾಲೆಟ್‌ನಿಂದ ಮತ್ತೂಂದು ವ್ಯಾಲೆಟ್‌ಗೆ
ಹಣವನ್ನು ವರ್ಗಾಯಿಸಲೂ ಸಾಧ್ಯ. ಇನ್ನು ಮುಂದೆ ಭಿನ್ನ ವ್ಯಾಲೆಟ್‌ಗಳಿಗೂ ಹಣವನ್ನು ಕಳುಹಿಸಬಹುದು. ಅಂದರೆ ಪೇಟಿಎಂ ಬಳಕೆದಾರ ಫೋನ್‌ಪೇ ಬಳಕೆದಾರನ ವ್ಯಾಲೆಟ್‌ಗೂ ಹಣ ವರ್ಗಾಯಿಸಬಹುದು.


Spread the love

About Laxminews 24x7

Check Also

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ಬೇಟಿ ಮಾಡಿದ ಆಹಾರ ಸಚಿವ ಕೆಹೆಚ್:- ಮುನಿಯಪ್ಪ

Spread the loveಕನಿಷ್ಠ ಬೆಂಬಲ ಬೆಲೆ ಯೋಜನೆಯ ಬಾಕಿ ಮೊತ್ತ 1446 ಕೋಟಿ ರೂ ಗಳ ಬಿಡುಗಡೆಗೆ ಮನವಿ ನವದೆಹಲಿ:ಮಾನ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ